Mangalore- ಅತೀ ದೊಡ್ಡ ವಿಮಾನ ಮಂಗಳೂರು ಏರ್ ಪೋರ್ಟ್ ನಲ್ಲಿ ಲ್ಯಾಂಡಿಂಗ್ (Video)
Monday, May 31, 2021
ಮಂಗಳೂರು; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶದ ಅತಿ ದೊಡ್ಡದು ಎನ್ನಲಾದ ಕಾರ್ಗೋ ವಿಮಾನ ನಿನ್ನೆ ಬೆಳಿಗ್ಗೆ ಲ್ಯಾಂಡ್ ಆಗಿದೆ.
ನಾಲ್ಕು ಇಂಜಿನ್ ಗಳನ್ನು ಒಳಗೊಂಡ ಇದು ಭಾರತೀಯ ವಾಯುಪಡೆಗೆ ಸೇರಿದ ಮಿಲಿಟರಿ ಸಾರಿಗೆ ವಿಮಾನವಾಗಿದೆ. ಸಿ- 17 ಗ್ಲೋಬ್ ಮಾಸ್ಟರ್ ವಿಮಾನ ಮಂಗಳೂರಿನಲ್ಲಿ ಲ್ಯಾಂಡ್ ಆಗುವ ಮೂಲಕ ಗಮನ ಸೆಳೆದಿದೆ.
ಗ್ಲೋಬ್ ಮಾಸ್ಟರ್ ದೇಶದ ಅತಿದೊಡ್ಡ ಕಾರ್ಗೋ ವಿಮಾನಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಕುವೈಟ್‌ನಿಂದ ಎನ್ ಎಂ ಪಿ ಟಿ ಗೆ ಬಂದಿದ್ದ ಆಕ್ಸಿಜನ್ ಟ್ಯಾಂಕರ್‌ಗಳನ್ನು ಖಾಲಿ ಮಾಡಿದ ಬಳಿಕ ಮರಳಿ ವಿಮಾನದ ಮೂಲಕ ಕೊಂಡೊಯ್ಯಲು ಈ ವಿಮಾನ ಮಂಗಳೂರಿಗೆ ಬಂದಿತ್ತು.
Today IAF Boeing C-17 Landed at IXE carrying oxygen and essential supplies
— Mangalore Avgeeks (@kudla_aviation) May 30, 2021
Video courtesy: @VitheshNaik#IndiaFightsCOVID19 pic.twitter.com/rjO4lNsQ2o