ಸುಳ್ಳು ಸುದ್ದಿ- ಮಂಗಳೂರಿನಲ್ಲಿ ವೈರಲ್ ಆಗಿರುವ ಈ ನ್ಯೂಸ್ ನಂಬಬೇಡಿ!
Thursday, May 20, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಸುದ್ದಿಯೊಂದು ವೈರಲ್ ಆಗಿದ್ದು ಇದು ಸುಳ್ಳು ಸುದ್ದಿ ಎಂದು ಜಿಲ್ಲಾಡಳಿತ ಪ್ರಕಟನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ, ಮೇ 24 ರ ನಂತರ ಯಾವುದೇ ಮದುವೆ ಇಲ್ಲ! ಎಂಬ ಹೆಡ್ಡಿಂಗ್ ನಲ್ಲಿ ಸ್ಥಳೀಯ ವೆಬ್ ಸೈಟ್ ವೊಂದು ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿ ಜಿಲ್ಲೆಯಾದ್ಯಂತ ವೈರಲ್ ಆಗಿ ಜನ ಆತಂಕಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಪ್ರಕಟನೆ ನೀಡಿದ್ದು " ಜಿಲ್ಲಾಡಳಿತದಿಂದ ಈ ರೀತಿ ಯಾವುದೇ ಆದೇಶ ಇರುವುದಿಲ್ಲ. ಈ ರೀತಿಯ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು. ಸುಳ್ಳು ಸುದ್ದಿ ಬಿತ್ತರಿಸಿರುವ ಈ ಸಂಸ್ಥೆಯ ವಿರುದ್ದ ದೂರು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.