
ಖುಷಿ ಪಡಬೇಕಾದ ಮದುವೆಯಲ್ಲಿ ಹಾರ ಬದಲಾಯಿಸುವ ವೇಳೆ ವಧು ಸಿಟ್ಟಾಗಿದ್ಯಾಕೆ? - ಟ್ರೆಂಡಿಂಗ್ ಆಗಿದೆ ಈ ವಿಡಿಯೋ
ಮದುವೆಯೆಂದರೆ ಎಲ್ಲರಲ್ಲೂ ಸಂತಸ ಇರುತ್ತದೆ. ವಧು ವರರ ಕುಟುಂಬದವರು ಸಂತಸ ಪಡುವ ಈ ಸಂಭ್ರಮದಲ್ಲಿ ವಧುವೆ ಸಿಟ್ಟಾಗಿ ಕಂಡರೆ ಎಲ್ಲರ ಮೂಡ್ ಹಾಳಾಗುತ್ತದೆ.
ಇಲ್ಲೊಂದು ಮದುವೆಯಲ್ಲಿ ವಧುವೊಬ್ಬಳು ಮದುವೆಯಲ್ಲಿ ಹಾರ ಬದಲಾಯಿಸುವ ವೇಳೆಯಲ್ಲಿ ಸಿಟ್ಟಾಗಿ ವರ್ತಿಸಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೇದಿಕೆಯಲ್ಲಿದ್ದ ವಧುವರರಿಗೆ ಕೆಳಗೆ ನಿಂತವರು ತಮಾಷೆ ಮಾಡುತ್ತಿದ್ದರು. ಇದಕ್ಕೆ ವಧು ಸಿಟ್ಟಾಗರಬೇಕು ಎಂದು ಅಂದಾಜಿಸಲಾಗಿದೆ. ಈ ಸಿಟ್ಟಿನಿಂದಲೇ ವರನಿಗೆ ಹಾರ ಹಾಕಿದ್ದಾಳೆ. ಆಕೆಯ ಮುಖದ ವರ್ತನೆಯಿಂದ ಆ ಕ್ಷಣ ಆಕೆ ಸಂತಸವಾಗಿರಲಿಲ್ಲ ಎಂಬುದನ್ನು ತೋರಿಸುತ್ತಿದೆ. ಈ ಘಟನೆ ಯಾವಾಗ ನಡೆದದ್ದು, ಎಲ್ಲಿಯದು ಎಂಬ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ