
ಉಳ್ಳಾಲ; ಪೊಟೋ ಶೂಟ್ ಗೆ ತಯಾರಾದ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ- ಆತ್ಮಹತ್ಯೆ? ಕೊಲೆ ?
Wednesday, March 10, 2021
ಮಂಗಳೂರು; ಬೆಂಗಳೂರಿಗೆ ಮಧ್ಯಾಹ್ನ ಪೊಟೋ ಶೂಟ್ ಗೆ ಹೊರಡಬೇಕಾದವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಕೆಯ ಸಾವಿನ ಬಗ್ಗೆ ಅನುಮಾನ ಸೃಷ್ಟಿಸಿದೆ.
ಕುಂಪಲದ ಪ್ರೇಕ್ಷ (19) ಮೃತ ದುರ್ದೈವಿ.ಕುಂಪಲ ಆಶ್ರಯ ಕೊಲೊನಿಯ ಮನೆಯೊಳಗೆ ಈಕೆಯ ಶವ ಪತ್ತೆಯಾಗಿದ್ದು ಯುವತಿಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ತ ಪ್ರಸಾದ್ ಮತ್ತು ವನಿತಾ ದಂಪತಿಗಳ ಕಿರಿಯ ಮಗಳಾದ ಪ್ರೇಕ್ಷ ಇಂದು ಮದ್ಯಾಹ್ನ ರೂಮಿನೊಳಗೆ ಚೂಡಿದಾರದ ಶಾಲನ್ನು ಕತ್ತಿಗೆ ಬಿಗಿದು ಆತ್ಮ ಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿದ್ದಾಳೆ.
ತಂದೆ ತಾಯಿ ಕೆಲಸಕ್ಕೆ ತೆರಳಿದ್ದು ಈಕೆಯ ಅಕ್ಕ ಪ್ರತೀಕ್ಷ ಕಾಲೇಜಿಗೆ ತೆರಳಿದ್ದಳು. ಮದ್ಯಾಹ್ನ ಸ್ಥಳೀಯ ಮಹಿಳೆಯೋರ್ವಳಿಗೆ ಈಕೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಗೊತ್ತಾಗಿದ್ದು ಅವರು ಪ್ರೇಕ್ಷಲ ತಾಯಿಗೆ ಮಾಹಿತಿ ನೀಡಿದ್ದಾರೆ.
![]() |
ಈಕೆ ಪೊಟೋ ಶೂಟ್ ಗೆಂದು ಇಂದು ಮಧ್ಯಾಹ್ನ ಬೆಂಗಳೂರಿಗೆ ತೆರಳಬೇಕಿತ್ತು. ಆದರೆ ಈಕೆ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿರುವುದು ಅನುಮಾನ ಸೃಷ್ಟಿಸಿದೆ