ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ನಿಂದ ಕುಲಪತಿ ಮಾಡ್ತೇನೆ ಅಂತ ಮೇಷ್ಟ್ರಿಗೆ ಟೋಪಿ!
Monday, March 29, 2021
ಮಂಗಳೂರು: ಹಲವಾರು ಹಿಂದುಪರ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ರಾಮ ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ತನ್ನ ನೀಚ ಕೆಲಸದಿಂದ ಕೃಷ್ಣ ಜನ್ಮಸ್ಥಾನ ಸೇರಿದ್ದಾನೆ.
ಮಂಗಳೂರಿನ ಪ್ರಸಾದ್ ಅತ್ತಾವರ ಹಲವಾರು ಹಿಂದುಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ ವ್ಯಕ್ತಿ. ಶ್ರೀರಾಮಸೇನೆಯಿಂದ ದೂರವಾಗಿ ರಾಮಸೇನೆಯನ್ನು ಕಟ್ಟಿಕೊಂಡಿದ್ದ ಈ ವ್ಯಕ್ತಿ ಇತ್ತೀಚೆಗೆ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರೋರ್ವರಿಗೆ ಈತ ಪರಿಚಯವಾಗಿದ್ದ. ಅಧ್ಯಾಪಕರ ಪರಿಚಯವಾದ ಬಳಿಕ ಅಧ್ಯಾಪಕರಿಗೆ ತಾನೊಬ್ಬ ಪ್ರಭಾವಿ ಎಂಬ ಬಿಲ್ಡಪ್ಪು ಕೊಟ್ಟಿದ್ದ. ಸಿಎಂ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಇದ್ದ ಪೊಟೋ ಗಳನ್ನು ತೋರಿಸಿ ಅವರೊಂದಿಗೆ ತಾನು ಸಲುಗೆಯಲ್ಲಿದ್ದು ಯಾವ ಕೆಲಸವನ್ನು ಮಾಡಬಲ್ಲೆ ಎಂದು ರೀಲು ಬಿಟ್ಟಿದ್ದ. ಬಳಿಕ ಈ ಪ್ರಾಧ್ಯಾಪಕರಿಗೆ ಕುಲಪತಿ ಮಾಡ್ತೇನೆ ಅಂತ ನಂಬಿಸಿ ಅವರಲ್ಲಿ 30 ಲಕ್ಷ ರೂ ಡಿಮ್ಯಾಂಡ್ ಮಾಡಿದ್ದ. ಈತನ ಮಾತನ್ನು ನಂಬಿದ ಮೇಷ್ಟ್ರು 15 ಲಕ್ಷ ಕ್ಯಾಶ್ , ಮೂರು ಖಾಲಿ ಚೆಕ್ ನೀಡಿದ್ದರು. ಆದರೆ ಆ ಬಳಿಕ ಈತ ಟೋಪಿ ಹಾಕಿದ್ದು ಮೇಷ್ಟ್ರಿಗೆ ಗೊತ್ತಾಯಿತು. ಸೀದಾ ಹೋಗಿ ಹಣ ಕೇಳಿದರೆ ಜೀವ ಬೆದರಿಕೆ ಹಾಕಿದ್ದ. ಹಣ ಕಳೆದುಕೊಂಡ ಮೇಷ್ಟ್ರು ಕೊನೆಗೆ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈತನನ್ನು ಬಂಧಿಸಿ ಈತನ ಹಿಸ್ಟರಿ ಗಮನಿಸಿ ಆತನ ಮೇಲೆ ಕಂಕನಾಡಿ ಮತ್ತು ಬಂದರ್ ಠಾಣೆಯಲ್ಲಿ ರೌಡಿ ಶೀಟ್ ತೆರೆದಿದ್ದಾರೆ.