ಮಂಗಳೂರು; ಮದುವೆ ಮನೆಯಲ್ಲಿ ಹಮೀದ್ ಮೌಲಾ ನ ಕಾಮದಾಟ- ಬಂಧನ
Monday, March 29, 2021
ಮಂಗಳೂರು; ಬಂಟ್ವಾಳ ತಾಲೂಕಿನ ವಿಟ್ಲದ ಇಡ್ಕಿದು ಎಂಬಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕನೊಂದಿಗೆ ಕಾಮದಾಟ ಆಡಲು ಹೋಗಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ.
ಪುತ್ತೂರು ತಾಲೂಕಿನ ಕಬಕ ನಿವಾಸಿ ಹಮೀದ್ ಮೌಲ ಬಂಧಿತ ಆರೋಪಿ. ಮಾರ್ಚ್ 27 ರಂದು ರಾತ್ರಿ ವಿಟ್ಲ ಬಳಿಯ ಇಡ್ಕಿದುವಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಹೆತ್ತವರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಅಪ್ರಾಪ್ತ ಬಾಲಕನನ್ನು ಪುಸಲಾಯಿಸಿ ಕಾರ್ಯಕ್ರಮವಾಗುತ್ತಿದ್ದ ಸ್ಥಳದ ಸಮೀಪದ ಮನೆಗೆ ಕರೆದುಕೊಂಡು ಹೋಗಿದ್ದ. ಈತ ಅಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದು ಬಾಲಕ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾನೆ.
ಈ ಬಗ್ಗೆ ಬಾಲಕನ ತಂದೆ ವಿಟ್ಲ ಠಾಣೆಯಲ್ಲಿ ದೂರು ನೀಡಿದ್ದು ಪೋಕ್ಸೋ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.