ಮಂಗಳೂರಿನಲ್ಲಿ ಮದುವೆ ದಿನವೆ ರಾತ್ರಿ ನಡೆಯಿತು ದುರ್ಘಟನೆ- ವಧುವಿಗೆ ಹೃದಯಾಘಾತ
Monday, March 1, 2021
ಮಂಗಳೂರು; ಮಂಗಳೂರಿನಲ್ಲಿ ಮದುವೆ ದಿನವೆ ರಾತ್ರಿ ಹೃದಯಾಘಾತದಿಂದ ವಧು ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಗಳೂರಿನ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಕೆಎಚ್‌ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂಬವರ ಮದುವೆ ನಿನ್ನೆ ನಡೆದಿತ್ತು. ರಾತ್ರಿ ಇವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್ ಎಂಬವರೊಂದಿಗೆ ನಿನ್ನೆ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ನೆರವೇರಿತ್ತು. ಬಳಿಕ ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿತ್ತು.
ಸೋಮವಾರ ಮುಂಜಾನೆ 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದೆ.