-->

BIGBOSS  8 ರಲ್ಲಿ 17 ಸ್ಪರ್ಧಿಗಳು - ಮನೆಯೊಳಗೆ ಇರುವವರು ಯಾರು ಗೊತ್ತಾ?

BIGBOSS 8 ರಲ್ಲಿ 17 ಸ್ಪರ್ಧಿಗಳು - ಮನೆಯೊಳಗೆ ಇರುವವರು ಯಾರು ಗೊತ್ತಾ?


ಬೆಂಗಳೂರು; ಕನ್ನಡದಲ್ಲಿ ಕಿಚ್ಚ ಸುದೀಪ್ ನಿರ್ವಹಿಸುವ ಬಿಗ್ ಬಾಸ್ 8 ಕ್ಕೆ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದ 17 ಮಂದಿಯ ವಿವರ

1. ಟಿಕ್ ಟಾಕ್ ಸ್ಟಾರ್ ಧನುಶ್ರಿ- ಹಾಸನ ಮೂಲದ ಧನುಶ್ರೀ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.  ಮನೆಗೆ ಬಂದವರೆ ಸುದೀಪ್ ಅವರನ್ನು ದೇವರೆಂದು ಸಂಭೋಧಿಸಿದ್ದಾರೆ.

2. ನಟಿ ಶುಭಾ ಪೂಂಜಾ- ನಟಿ ಶುಭಾ ಪೂಂಜಾ ಎರಡನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಕರಾವಳಿ ಮೂಲದ ಶುಭ ಪೂಂಜಾ ಅಮ್ಮನಲ್ಲಿ ತುಳುವಿನಲ್ಲಿ ಮಾತಾಡಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಶುಭಾ ನಾನು ಯಾರಿಗೂ ಹರ್ಟ್ ಮಾಡಲ್ಲ. ಚೆನ್ನಾಗಿ ಆಡುತ್ತೇನೆ ಎಂಬ ನಂಬಿಕೆಯಿದೆ. ಕಂಪರ್ಟ್ ಝೋನ್ ನಿಂದ ಆಚೆ ಬರುವ ಪ್ರಯತ್ನ ಮಾಡುತ್ತೇನೆ. ಧೈರ್ಯ ಮಾಡಿ ಬಿಗ್ ಬಾಸ್ ಮನೆಗೆ ಬಂದಿದ್ದೇನೆ ಎಂದು ಹೇಳಿದರು.

3. ಹಿರಿಯ ನಟ ಶಂಕರ್ ಅಶ್ವಥ್ - ಹಿರಿಯ ನಟ ಶಂಕರ್ ಅಶ್ವಥ್ ಅವರು ಬಾವುಕರಾಗಿ ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಜೀವನ ಪೂರ್ತಿ ಅಪ್ಪನಿಗೆ ಭಾರವಾದೆ ಎಂದು ಮನೆ ಪ್ರವೇಶಿಸಿದ ಕೆಲಸ ಇಲ್ಲ ಎಂದು ಗೊಣಗುವುದು ಬೇಡ ಎಂದು ಅಟೋ ಡ್ರೈವರ್ ಆದೆ ಎಂದು ಹೇಳಿದರು.

4.ಗಾಯಕ ವಿಶ್ವನಾಥ್ ಹಾವೇರಿ - ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ವಿಶ್ವನಾಥ್ ಬಿಗ್ ಬಾಸ್  ಮನೆಗೆ ಈವರೆಗೆ ಎಂಟ್ರಿ ಕೊಟ್ಟ ಅತಿ ಕಿರಿಯ ವ್ಯಕ್ತಿ. ಮನೆ ಪ್ರವೇಶಿಸಿದ ವಿಶ್ವನಾಥ್ ಅಮರ್ ಸಿನಿಮಾದ ಸುಮ್ಮನೆ ಹೀಗೆ ನಿನ್ನನೆ ಹಾಡನ್ನು ಹಾಡಿದರು.

5. ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ - ಬಿಗ್ ಬಾಸ್ ಮನೆಗೆ 5 ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ವೈಷ್ಣವಿ ಗೌಡ.‌ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ  ಪಾತ್ರ ದಲ್ಲಿ ಮನೆ ಮಾತಾಗಿರುವ ವೈಷ್ಣವಿ ಗೌಡ ಮನೆಗೆ ಹೊಸ ಲುಕ್ ನೀಡಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿದ ವೈಷ್ಣವಿ ಗೌಡ ಮೊದಲ ಬಾರಿ ತುಂಬಾ ಸಮಯ ಕುಟುಂಬ ಬಿಟ್ಟು ಇರಬೇಕಾಗಿದೆ. ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.


6. ಕೆ. ಪಿ ಅರವಿಂದ್ - ಬೈಕ್ ರೇಸರ್ ಆಗಿರುವ ಕೆ ಪಿ ಅರವಿಂದ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ 6 ನೇ ಸ್ಪರ್ಧಿ. ವಿಶ್ವವಿಖ್ಯಾತ ಡಕಾರ್ ರ‌್ಯಾಲಿಯಲ್ಲಿ ಇವರು ಭಾಗವಹಿಸಿದ್ದರು. ಮಲಯಾಳಂ ನ ಸುಪರ್ ಹಿಟ್ ಚಲನಚಿತ್ರ ಬೆಂಗಳೂರು ಡೇಸ್ ಸಿನಿಮಾದಲ್ಲೂ ನಟಿಸಿದ್ದರು.

7. ನಿಧಿ ಸುಬ್ಬಯ್ಯ - ನಟಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ 7 ನೇ ಸ್ಪರ್ಧಿ. ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ನಿಧಿ ಸುಬ್ಬಯ್ಯ ಲಾಕ್ ಡೌನ್ ನಲ್ಲಿ ಅಡುಗೆ ಮಾಡಲು ಕಲಿತಿದ್ದೇನೆ ಎಂದು ಹೇಳಿದರು

8. ಬ್ರೋ ಗೌಡ - ಬಿಗ್ ಬಾಸ್ ಮನೆಗೆ 8 ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಬ್ರೋ ಗೌಡ. ಇವರ ನಿಜವಾದ ಹೆಸರು ಸುಮಂತ್. ಸೋಷಿಯಲ್ ಮೀಡಿಯಾದಲ್ಲಿ ಇವರು ಬ್ರೋ ಗೌಡ ಎಂದು ಫೇಮಸ್ ಆಗಿದ್ದಾರೆ.

9.ನಟಿ ಗೀತಾ ಭಾರತಿ ಭಟ್- ಕಿರುತೆರೆ ನಟಿ ಗೀತಾ ಭಾರತಿ ಭಟ್  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಮನೆಗೆ ಬಂದವರೆ ಕೋಟಿಗೊಬ್ಬ 2 ಚಿತ್ರದ ಹಾಡು ಹಾಡುವ ಮೂಲಕ ರಂಜಿಸಿದರು. ಬ್ರಹ್ಮಗಂಟು ಧಾರಾವಾಹಿ ಮೂಲಕ ಇವರು ಜನಪ್ರಿಯ ರಾಗಿದ್ದಾರೆ.

10. ನಟ ಮಂಜು ಪಾವಗಡ - ಮಜಾ ಭಾರತ ರಿಯಾಲಿಟಿ ಶೋವಿನಲ್ಲಿ ಜನಪ್ರಿಯ ‌ರಾಗಿರುವ ಮಂಜು ಪಾವಗಡ 10 ನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದಾರೆ.

11. ನಟಿ ದಿವ್ಯಾ- ಬಿಗ್ ಬಾಸ್ ಮನೆಗೆ 11 ನೇ ಸ್ಪರ್ಧಿಯಾಗಿ ನಟಿ ದಿವ್ಯಾ ಎಂಟ್ರಿ ಕೊಟ್ಟಿದ್ದಾರೆ.


12.ಚಂದ್ರಕಲಾ ಮೋಹನ್; ಬಿಗ್ ಬಾಸ್ ಮನೆಗೆ 12 ನೇ ಸ್ಪರ್ಧಿಯಾಗಿ ಎಂಟ್ರಿಯಾದ ಚಂದ್ರಕಲಾ ಮೋಹನ್ ಅವರು ಪುಟ್ಟಗೌರಿ ಮದುವೆ, ಕಮಲಿ ಮೊದಲಾದ ಧಾರಾವಾಹಿ ಗಳಲ್ಲಿ ನಟಿಸಿದವರು.

13. ರಘು ಗೌಡ- ಕಾಮಿಡಿ ವಿಡಿಯೋ ಮೂಲಕ ಮನೆಮಾತಾಗಿರುವ ರಘುಗೌಡ 13 ನೇ ಸ್ಪರ್ಧಿ. ರಘು ವೈನ್ ಸ್ಟೋರ್ ಎಂಬ ಯೂಟ್ಯೂಬ್ ಚಾನೆಲ್ ಮಾಡಿ ಮನರಂಜಿಸುತ್ತಿದ್ದಾರೆ.


14.ಪ್ರಶಾಂತ್ ಸಂಬರ್ಗಿ; ಬಿಗ್ ಬಾಸ್ ಮನೆಗೆ ಸಾಮಾಜಿಕ ಕಾರ್ಯಕರ್ತ ನಾಗಿರುವ ಪ್ರಶಾಂತ್ ಸಂಬರ್ಗಿ ಪ್ರವೇಶಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಪ್ರಕರಣ ಬಯಲಾಗಲು ಇವರ ಪಾತ್ರವು ಇದೆ. 

15. ನಟಿ ದಿವ್ಯಾ ಉರುಡುಗ - ಬಿಗ್ ಬಾಸ್ ಮನೆಗೆ 15 ನೇ ಸ್ಪರ್ಧಿಯಾಗಿ ನಟಿ ದಿವ್ಯಾ ಉರುಡುಗ ಪ್ರವೇಶಿಸಿದ್ದಾರೆ.

16.ಕ್ರಿಕೆಟಿಗ ರಾಜೀವ್ - ಬಿಗ್ ಬಾಸ್ ಮನೆಗೆ 16 ನೇ ಸ್ಪರ್ಧಿಯಾಗಿ ಬಂದ ರಾಜೀವ್ ಕ್ರಿಕೆಟಿಗ. ರಾಜೀವ್ ಸಿಸಿಎಲ್ ಕ್ರಿಕೆಟಿಗರಾಗಿದ್ದಾರೆ

17. ನಿರ್ಮಲ ಚೆನ್ನಪ್ಪ - ಬಿಗ್ ಬಾಸ್ ಮನೆಗೆ 17 ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ನಿರ್ಮಲ ಚೆನ್ನಪ್ಪ. ಇವರು ತಲ್ಲಣ ಸಿನಿಮಾ ನಟನೆಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99