PFI ಬಿಜೆಪಿಯ ಬಿ ಟೀಂ- pfi ನಿಷೇಧ ಮಾಡಲಿ; ಸಿದ್ದರಾಮಯ್ಯ ಆಗ್ರಹ (video)
Monday, February 22, 2021
(ಗಲ್ಫ್ ಕನ್ನಡಿಗ)ಮಂಗಳೂರು; PFI ಬಿಜೆಪಿ ಬಿ ಟೀಂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಪಿಎಫ್ ಐ ಬಿಜೆಪಿ ಬಿ ಟೀಂ ಆಗಿದೆ. ಉಳ್ಳಾಲದಲ್ಲಿ ರ‌್ಯಾಲಿ ಮಾಡಲು ಅವರಿಗೆ ಅನುಮತಿ ಕೊಟ್ಟವರು ಬಿಜೆಪಿಯವರು. ಪಿಎಫ್ಐ , ಎಸ್ ಡಿ ಪಿ ಐ ವಿರುದ್ಧ ಸಾಕಷ್ಟು ಸಾಕ್ಚ್ಯಗಳು ಇದೆಯಲ್ವ. ಅದನ್ನು ಕೇಂದ್ರ ಕ್ಕೆ ಕಳುಹಿಸಿ ನಿಷೇಧ ಮಾಡಲಿ. ಎಸ್ ಡಿ ಪಿ ಐ ರದ್ದು ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದ ಅವರು ಅದನ್ನು ಬೆಳೆಸುತ್ತಿರುವವರು ಅವರು ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
(ಗಲ್ಫ್ ಕನ್ನಡಿಗ)