ಮೊಡವೆ ಇಟ್ಕೊಂಡು ಶಾಲೆಗೆ ಹೇಗೆ ಹೋಗಲಿ; ಪುತ್ತೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
Saturday, January 2, 2021
(ಗಲ್ಫ್ ಕನ್ನಡಿಗ) ಮಂಗಳೂರು;
ಮುಖದ ಮೇಲಿನ ಮೊಡವೆ ಇಟ್ಕೊಂಡು ಶಾಲೆಗೆ ಹೇಗೆ ಹೋಗಲಿ ಎಂದು ಮನನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ನೇರೋಳ್ತಡ್ಕದಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ಪಾಲ್ತಾಡಿ ಗ್ರಾಮದ ನೇರೋಲ್ತಡ್ಕ ರಾಮ ಎಂಬವರ ಪುತ್ರಿ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆ ಪುತ್ತೂರು ತಾಲೂಕಿನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ನಿನ್ನೆ ಶಾಲಾ ಆರಂಭವಾಗಿದ್ದರಿಂದ ಶಾಲೆಗೆ ಹೋಗುವುದಾಗಿ ಹೇಳಿ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿರುವ ಮರಕ್ಕೆ ಚೂಡಿದಾರದ ಶಾಲ್ ನಿಂದ ನೇಣಿಗೆ ಕೊರಳೊಡ್ಡಿದ್ದಾಳೆ.
(ಗಲ್ಫ್ ಕನ್ನಡಿಗ)ದಿವ್ಯಾ ಮುಖದ ಮೇಲಿನ ಮೊಡವೆಯ ಕಾರಣದಿಂದ ಯಾರ ಮನೆಗೂ,ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ. ಈ ನಡುವೆ ಶಾಲೆಗೆ ಹೇಗೆ ಹೋಗುವುದು ಎಂದು ಮನನೊಂದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.