ಮಂಗಳೂರಿನಲ್ಲಿ ದುರಂತಕ್ಕೀಡಾದ ಬೋಟ್; ಇಬ್ಬರು ಮೀನುಗಾರರ ಮೃತದೇಹ ಪತ್ತೆ
Tuesday, December 1, 2020
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಧಕ್ಕೆ ಅಳಿವೆ ಬಾಗಿಲಿನಲ್ಲಿ ಶ್ರೀರಕ್ಷಾ ಹೆಸರಿನ ಪರ್ಸೀನ್ ಬೋಟ್ ಒಂದು ಮುಳುಗಡೆಯಾಗಿ ನಾಪತ್ತೆಯಾಗಿದ್ದ 6 ಮಂದಿ ಮೀನುಗಾರರು ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ.
(ಗಲ್ಪ್ ಕನ್ನಡಿಗ) ಮಂಗಳೂರಿನ ಬೊಕ್ಕಪಟ್ಣದ ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಅವರ ಮೃತದೇಹ ಪತ್ತೆಯಾಗಿದೆ.
ಸುಮಾರು 22 ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ನಡೆಸಿ ಮೀನನ್ನು ಬೋಟ್‌ಗೆ ತುಂಬಿಸುವ ವೇಳೆ ಬೋಟ್‌ನೊಳಗೆ ನೀರು ನುಗ್ಗಿ ಈ ದುರಂತ ಸಂಭವಿಸಿತ್ತು
(ಗಲ್ಪ್ ಕನ್ನಡಿಗ) ಮೀನುಗಾರರು ಸುರಕ್ಷಾ ಬೋಟ್‌ನಲ್ಲಿ ನಿನ್ನೆ ಮುಂಜಾನೆ ಬೋಳಾರದಿಂದ ಮೀನುಗಾರಿಕೆಗೆ ತೆರಳಿದ್ದರು. ಇಬ್ಬರ ಮೃತದೇಹ ಪತ್ತೆಯಾಗಿರುವುದರಿಂದ ನಾಪತ್ತೆಯಾದ ನಾಲ್ವರ ಮೀನುಗಾರರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.
(ಗಲ್ಪ್ ಕನ್ನಡಿಗ)