6 ಕೋಟಿ ವೆಚ್ಚದ ಮದುವೆ, ಮೊದಲ ರಾತ್ರಿಯಲ್ಲಿ ಟೈಟ್- ಕೊನೆಗೆ ಸೇರಿದ್ದು ಪರಪ್ಪನ ಅಗ್ರಹಾರ!
(ಗಲ್ಪ್ ಕನ್ನಡಿಗ)ಬೆಂಗಳೂರು: ಆರು ಕೋಟಿ ವೆಚ್ಚದಲ್ಲಿ ಅದ್ದೂರಿ ಮದುವೆಯಾದ ವರನೋರ್ವ ಮದುವೆ ಮೊದಲ ರಾತ್ರಿಯೆ ಕಂಠಮಟ್ಟ ಕುಡಿದು ಬಂದು ಪತ್ನಿಗೆ ಹಿಂಸೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ತಳ್ಳಿದ್ದಾರೆ.
(ಗಲ್ಪ್ ಕನ್ನಡಿಗ)ರಿಯಲ್ ಎಸ್ಟೇಟ್ ಉದ್ಯಮಿ, ಎಸ್ ಎಲ್ ಬಿ ನಗರದ ಭರತ್ ರೆಡ್ಡಿ ಇದೀಗ ಪೊಲೀಸರ ಅತಿಥಿಯಾಗಿರುವ ನವವಿವಾಹಿತ. ಈತ ತಿಂಗಳ ಹಿಂದೆ ಎಚ್ ಎಸ್ ಆರ್ ಲೇಔಟ್ ನ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾದ ಮೊದಲ ದಿನ ರಾತ್ರಿಯೆ ಈತ ಕಂಠಪೂರ್ತಿಕುಡಿದು ಬಂದು ಗಲಾಟೆ ಮಾಡಿಕೊಂಡಿದ್ದಾನೆ.
(ಗಲ್ಪ್ ಕನ್ನಡಿಗ)ಭರತ್ ರೆಡ್ಡಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು ತಿಂಗಳಿಗೆ ಲಕ್ಷಾಂತರ ಆದಾಯ ಪಡೆಯುತ್ತಿದ್ದಾನೆ. ಈತ ತನ್ನ ಕುಟುಂಬದ ವರು ನಿಶ್ಚಯಿಸಿದ ಯುವತಿ ಜೊತೆ ಮದುವೆ ಮಾಡಿಕೊಂಡಿದ್ದ. ಈತ ಮೊದಲ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ್ದು ಮಾತ್ರವಲ್ಲದೆ ಪ್ರತಿನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ.
(ಗಲ್ಪ್ ಕನ್ನಡಿಗ)ಈತ ಮದುವೆಯಾದ ಯುವತಿಯ ತಾಯಿ ಅನಾರೋಗ್ಯ ಕಾರಣದಿಂದ ಕಳೆದ ವರ್ಷ ಮೃತಪಟ್ಟಿದ್ದರು. ಈಕೆಯ ತಾಯಿ ಮೃತಪಟ್ಟ ವರ್ಷದೊಳಗೆ ಮದುವೆ ಮಾಡಲು ನಿರ್ಧರಿಸಿದಂತೆ ಯುವತಿಯ ತಂದೆ ಈ ಮದುವೆ ಮಾಡಿದ್ದರು. ವರನ ಕುಟುಂಬದವರ ಬೇಡಿಕೆಯಂತೆ ಐದು ಕೆ ಜಿ ಚಿನ್ನ , 96 ಲಕ್ಷದ ಬೆಂಜ್ ಕಾರು ವರದಕ್ಷಿಣೆಯಾಗಿ ಕೊಟ್ಟಿದ್ದರು. ಅಂದಾಜು ಆರು ಕೋಟಿ ಖರ್ಚು ಮಾಡಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಆದರೂ ವಿವಾಹವಾದ ಬಳಿಕ ಭರತ್ ನೀಡಿದ ಹಿಂಸೆಯಿಂದ ಯುವತಿ ಎಚ್ ಎ ಎಲ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)