ಮಂಗಳೂರು ಬೋಟ್ ದುರಂತ: ಮೀನುಗಾರರ ಮೃತದೇಹ ಸಿಕ್ಕ ಆ ಕೊನೆಗಳಿಗೆಯಲ್ಲಿ ನಡೆಯಿತು ಆ ದುರ್ಘಟನೆ!
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನಲ್ಲಿ ನಡೆದ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಆರು ಮಂದಿಯು ಸಾವನ್ನಪ್ಪಿದ್ದು ಇದರಲ್ಲಿ ಐದು ಮಂದಿಯ ಮೃತದೇಹ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
(ಗಲ್ಪ್ ಕನ್ನಡಿಗ)ಇಂದು ನಾಲ್ವರ ಮೃತದೇಹಕ್ಕೆ ಶೋಧ ನಡೆಸಿದ ನುರಿತ ಮುಳುಗುತಜ್ಞರು ನಾಲ್ವರನ್ನು ಪತ್ತೆಹಚ್ಚಲು ಯಶಸ್ವಿಯಾದರೂ ಎಲ್ಲರ ಮೃತದೇಹವನ್ನು ತರಲು ಸಾಧ್ಯವಾಗಿಲ್ಲ. ನಿನ್ನೆ ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಅವರ ಮೃತದೇಹ ಸಿಕ್ಕಿದರೆ ಇಂದು ಮಧ್ಯಾಹ್ನದ ಮೊದಲು ಚಿಂತನ್ ಮತ್ತು ಹಸೈನಾರ್ ಮೃತದೇಹ ಸಿಕ್ಕಿತ್ತು. ಮಧ್ಯಾಹ್ನದ ಬಳಿಕ ಝಿಯಾದ್ ಮತ್ತು ಅನ್ಸಾರ್ ಮೃತದೇಹವನ್ನು ಪತ್ತೆ ಹಚ್ಚಲಾಯಿತು. ಆದರೆ ಅನ್ಸಾರ್ ಮೃತದೇಹವನ್ನು ಸಮುದ್ರದಾಳದಿಂದ ಮೇಲೆ ತರುವಾಗ ಮುಳುಗುತಕ್ಞರ ಕೈಜಾರಿ ಮತ್ತೆ ಅನ್ಸಾರ್ ಮೃತದೇಹ ಕಡಳಿನಾಳ ಸೇರಿದೆ.
(ಗಲ್ಪ್ ಕನ್ನಡಿಗ)ಸೋಮವಾರ ರಾತ್ರಿ ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಶ್ರೀರಕ್ಷಾ ಬೋಟ್ ಸಮುದ್ರದಲ್ಲಿ ದುರಂತಕ್ಕೀಡಾಗಿತ್ತು. ಇದರಲ್ಲಿ 22 ಮೀನುಗಾರರಿದ್ದು 16 ಮಂದಿ ಮೀನುಗಾರರು ಪಾರಾಗಿದ್ದರು.ಆರು ಮಂದಿ ನಾಪತ್ತೆಯಾಗಿದ್ದರು.
(ಗಲ್ಪ್ ಕನ್ನಡಿಗ)