-->

 ಲವ್ ಜೆಹಾದ್ ಆರೋಪವೊಂದಿದ್ದ ಐಎಎಸ್ ಜೋಡಿ ಎರಡೇ ವರ್ಷದಲ್ಲಿ ವಿಚ್ಚೇದನಕ್ಕೆ ಅರ್ಜಿ! (video)

ಲವ್ ಜೆಹಾದ್ ಆರೋಪವೊಂದಿದ್ದ ಐಎಎಸ್ ಜೋಡಿ ಎರಡೇ ವರ್ಷದಲ್ಲಿ ವಿಚ್ಚೇದನಕ್ಕೆ ಅರ್ಜಿ! (video)




ಜೈಪುರ: ಲವ್ ಜೆಹಾದ್ ಎಂಬ ಆರೋಪವೊಂದಿದ್ದರೂ ಪ್ರೇಮವಿವಾಹವಾಗಿದ್ದ ಐ ಎ ಎಸ್ ಜೋಡಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿ ಸುದ್ದಿ ಗ್ರಾಸವಾಗಿದೆ.


2015 ರಲ್ಲಿ ಐ ಎ ಎಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಮದ್ಯಪ್ರದೇಶದ ಟೀನಾ ಮತ್ತು ದ್ವಿತೀಯ ಸ್ಥಾನ ಪಡೆದಿದ್ದ ಜಮ್ಮು ಕಾಶ್ಮೀರದ ಆಥರ್ ನಡುವೆ ಪ್ರೇಮಾಂಕುರವಾಗಿತ್ತು. ಐ ಎಎಸ್ ಪರೀಕ್ಷೆಯಲ್ಲಿ ಟಾಪರ್ ಆದ ಮೊಲದ ದಲಿತ ಯುವತಿ ಎಂದು ಟೀನಾ ಹಿರಿಮೆಗೂ ಪಾತ್ರರಾಗಿದ್ದರು. ತರಬೇತಿ ವೇಳೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿ ಕುಟುಂಬದವರ ಒಪ್ಪಿಗೆ ಪಡೆದು 2018 ರಲ್ಲಿ ಜಮ್ಮು ಕಾಶ್ಮೀರದ ಪಹಲ್ ಗಾಂವ್ ನಲ್ಲಿ ವಿವಾಹವಾಗಿದ್ದರು. ಈ ಮದುವೆಯ ರಿಸೆಪ್ಸನ್ ನಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯು ನಾಯ್ಡು, ಆಗಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ , ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೂಡ ಪಾಲ್ಗೊಂಡಿದ್ದರು.


ಇವರ ಮದುವೆಗೆ ಹಿಂದೂ ಮಹಾಸಭಾ ತೀವ್ರ ವಿರೋಧ ವ್ಯಕ್ತಪಡಿಸಿ ಲವ್ ಜೆಹಾದ್ ಎಂದು ಆರೋಪಿಸಿತ್ತು. ಈ ವಿವಾಹವನ್ನು ರದ್ದು ಪಡಿಸಿ ಟೀನಾ ಅವರು ಖಾನ್ ಕುಟುಂಬಕ್ಕೆ ಮತಾಂತರವಾಗುವುದನ್ನು ತಪ್ಪಿಸುವಂತೆ ಆಕೆಯ ಪೋಷಕರಿಗೆ ಪತ್ರವನ್ನು ಬರೆದಿತ್ತು.


ಟೀನಾ ಅವರು ತನ್ನ ಹೆಸರಿನ ಮುಂದೆ ಖಾನ್ ಸೇರಿಸಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಖಾನ್ ಹೆಸರನ್ನು ತೆಗೆದುಹಾಕಿದ್ದರು. ಐಎಎಸ್ ಟಾಪರ್ ಆಗಿದ್ದ ಈ ಜೋಡಿ ಎರಡೇ ವರ್ಷದಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಕಿಕೊಂಡಿದೆ.

 


 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99