
ಮಂಗಳೂರಿನಲ್ಲಿ ಯುವತಿಯರೆ, ಮಹಿಳೆಯರೆ ಎಚ್ಚರದಿಂದಿರಿ!- ಮಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ ಈ ಖದೀಮರು...
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರು, ಯುವತಿಯರೆ ಇವರ ಟಾರ್ಗೆಟ್. ಮಂಗಳೂರಿನಲ್ಲಿ ಕೆಲವು ತಿಂಗಳಿನಿಂದ ನಿಂತೆ ಹೋಗಿದ್ದ ಸರಗಳ್ಳತನ ಪ್ರಕರಣ ಮತ್ತೆ ವರದಿಯಾಗಿದೆ.
(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ನಿನ್ನೆ ಒಂದೇ ದಿನ ಎರಡು ಸರಗಳ್ಳತನ ಪ್ರಕರಣ ವರದಿಯಾಗಿದೆ.
(ಗಲ್ಫ್ ಕನ್ನಡಿಗ)ಮೊದಲ ಪ್ರಕರಣದಲ್ಲಿ ಶಾಂತಿನಗರದ ಹೋಂಡಾ ಶೋ ರೂ ನಲ್ಲಿ ತಮ್ಮ ಕೆಲಸ ಮಾಡಿ ಮುಗಿಸಿ ತಮ್ಮ ಮನೆ ಉರುಂದಾಡಿಗುಡ್ಡೆ ಪಂಜಿಮೊಗರು ಗೆ ಮಹಿಳೆಯೊಬ್ಬರು ಹೋಗುತ್ತಿದ್ದಾಗ ಸಂಜೆ ಸುಮಾರು 6.50 ಗಂಟೆಯಿಂದ 7.00 ಗಂಟೆಯ ಮಧ್ಯದಲ್ಲಿ ರಾಘವೇಂದ್ರ ಮಠದ ಹತ್ತಿರ ಯಾರೋ ಒಬ್ಬ ವ್ಯಕ್ತಿ ಬೈಕಿನಲ್ಲಿ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಇದರಿಂದ ಮಹಿಳೆಗೆ ಭಯವಾಗಿ ಅವರ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಆ ವ್ಯಕ್ತಿಯು ಹಿಂದೆ ಬೈಕ್ ನಿಲ್ಲಿಸಿ ಹಿಂದುಗಡೆಯಿಂದ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಬಲವಂತದಿಂದ ಎಳೆದುಕೊಂಡು ಹೋಗಿರುತ್ತಾನೆ. ಚಿನ್ನದ ಕರಿಮಣಿ ಸರವು ಸುಮಾರು 22 ಗ್ರಾಮ್ ಇದ್ದು ಅದರ ಸುಮಾರು ಅಂದಾಜು ಮೌಲ್ಯ 80000/- ಆಗಿರಬಹುದು ಎಂದು ಅಂದಾಜಿಸಲಾಗಿದೆ.
(ಗಲ್ಫ್ ಕನ್ನಡಿಗ)ಮತ್ತೊಂದು ಪ್ರಕರಣದಲ್ಲಿ ದಿನಾಂಕ: 18-11-2020 ರಂದು ಮದ್ಯಾಹ್ನ ವೇಳೆಗೆ ತಮ್ಮ ಮನೆಯಿಂದ ಕದ್ರಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಂದ ಸಂಜೆ ವೇಳೆಗೆ ತನ್ನ ಮನೆಗೆ ವಾಪಾಸು ಹೊರಟು ಮಹಿಳೆ ಕೆ ಪಿ ಟಿ ಬಳಿಯ ಅರ್.ಟಿ.ಓ ಮೈದಾನದ ಬಳಿ ವ್ಯಾಸನಗರದಲ್ಲಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯ ಸಂಜೆ ಸುಮಾರು 6-20 ಗಂಟೆಗೆ ಎದುರಿನಿಂದ ಒಬ್ಬ ಅಪರಿಚಿತ ವ್ಯಕ್ತಿಯು ಬೈಕ್ ನ್ನು ನಿಲ್ಲಿಸಿ ರಿಪೇರಿ ಮಾಡುವಂತೆ ನಟಿಸುತ್ತಿದ್ದು, ಆತನನ್ನು ದಾಟಿ ಮುಂದೆ ಹೋದ ನಂತರ ಆತನು ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ ಸುಮಾರು ರೂ 54,000/- ಬೆಲೆ ಬಾಳುವ 13 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು ಸುಮಾರು ರೂ. 1,00,000/- ಮೌಲ್ಯದ 26 ಗ್ರಾಂ ತೂಕದ ಪಕಲ ಸರವನ್ನು ಒಟ್ಟು 154,000/- ಬೆಲೆ ಬಾಳುವ ಚಿನ್ನಾಭರಣಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾನೆ.
(ಗಲ್ಫ್ ಕನ್ನಡಿಗ) ಈ ಎರಡು ಘಟನೆಗಳು ಮಂಗಳೂರಿನಲ್ಲಿ ಮಹಿಳೆಯರಿಗೆ ಆತಂಕ ಸೃಷ್ಟಿಸಿದೆ.
(ಗಲ್ಫ್ ಕನ್ನಡಿಗ)