
ಮಿಥುನ್ ರೈ ವಾರ್ನಿಂಗ್; ಏರ್ ಪೋರ್ಟ್ ನಲ್ಲಿ ಮತ್ತೆ ಬಂತು ಹುಲಿವೇಷ ಕುಣಿತ
Thursday, November 19, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಗುತ್ತಿಗೆ ಪಡೆದ ಬೆನ್ನಿಗೆ ಮಂಗಳೂರು ಏರ್ ಪೋರ್ಟ್ ನಲ್ಲಿದ್ದ ಹುಲಿವೇಷ ಕುಣಿತವನ್ನು ತೆರವು ಮಾಡಿದ್ದ ಅದಾನಿ ಸಂಸ್ಥೆ ಯುವಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಮಿಥುನ್ ರೈ ವಾರ್ನಿಂಗ್ ನಿಂದ ಮತ್ತೆ ಸರಿ ದಾರಿಗೆ ಬಂದಿದ್ದಾರೆ.
(ಗಲ್ಫ್ ಕನ್ನಡಿಗ)ಅದಾನಿ ಸಂಸ್ಥೆ ಗುತ್ತಿಗೆ ಪಡೆದ ಬಳಿಕ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಹುಲಿವೇಷ ಕುಣಿತದ ಕಲಾಕೃತಿ ತೆರವು ಮಾಡಿದ್ದರು. ಅದರ ಬದಲಿಗೆ ಆನೆಯ ಕಲಾಕೃತಿ ಇಟ್ಟಿದ್ದರು.ಇದಕ್ಕೆ ಎರಡು ದಿನಗಳ ಹಿಂದೆ ಮಿಥುನ್ ರೈ ಪತ್ರಿಕಾಗೋಷ್ಠಿ ನಡೆಸಿ 24 ಗಂಟೆಯೊಳಗೆ ಮರು ಸ್ಥಾಪಿಸುವಂತೆ ಎಚ್ಚರಿಕೆ ನೀಡಿದ್ದರು.
(ಗಲ್ಫ್ ಕನ್ನಡಿಗ) ಮಿಥುನ್ ರೈ ಎಚ್ಚರಿಕೆ ಬಳಿಕ ಅದಾನಿ ಸಂಸ್ಥೆ ಯವರು ಮತ್ತೆ ಹುಲಿವೇಷ ಕುಣಿತ ಕಲಾಕೃತಿಯನ್ನು ಅದೇ ಸ್ಥಳದಲ್ಲಿ ಇಟ್ಟಿದ್ದಾರೆ.
(ಗಲ್ಫ್ ಕನ್ನಡಿಗ)