-->
ಮೋದಿ ಅಲೆ ಎಲ್ಲಿದೆ ಎಂದ ಸಿದ್ದರಾಮಯ್ಯ ಗೂಡು ಎಲ್ಲಿದೆ? - ನಳಿನ್ ಕುಮಾರ್ ಕಟೀಲ್

ಮೋದಿ ಅಲೆ ಎಲ್ಲಿದೆ ಎಂದ ಸಿದ್ದರಾಮಯ್ಯ ಗೂಡು ಎಲ್ಲಿದೆ? - ನಳಿನ್ ಕುಮಾರ್ ಕಟೀಲ್




ಮಂಗಳೂರು; ಮೋದಿ ಅಲೆ ಇಲ್ಲವೆ ಇಲ್ಲ, ಅದು ಎಲ್ಲಿದೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರ ಗೂಡು ಎಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ವರುಣದಿಂದ ಓಡಿಸಿಯಾಗಿದೆ. ಬಾದಾಮಿಯಿಂದಲೂ ಓಡಿಸಲಾಗುತ್ತದೆ. ಕರ್ನಾಟಕದಿಂದ ಹೊರದಬ್ಬಲಾಗಿದ್ದು ಅವರದು ಅಸ್ತಿತ್ವ ಎಲ್ಲಿದೆ ಎಂದು ಪ್ರಶ್ನಿಸಿದರು.



ಶಿರಾದಲ್ಲಿ ಸಂಘಟನಾತ್ಮಕ ಕಾರ್ಯ ಯಶಸ್ವಿಯಾಗಿದೆ.ಕೇಂದ್ರ ನಾಯಕರ ತಂತ್ರಗಾರಿಕೆ ಫಲಿಸಿದೆ.ಮೂರು ತಿಂಗಳ ಕಾಲ ಕಾರ್ಯಕರ್ತರು ಶ್ರಮವಹಿಸಿದ್ದಾರೆ.ಮೂರು ತಿಂಗಳ ತಂತ್ರಗಾರಿಕೆಗೆ ಉತ್ತಮ ಫಲಿತಾಂಶ ಸಿಕ್ಕಿದೆ ಎಂದರು.

ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಅನ್ನೋದನ್ನ ಜನತೆ ತೋರಿಸಿಕೊಟ್ಟಿದ್ದಾರೆ.ಕಾಂಗ್ರೆಸ್ ನ ಕಣ್ಣೀರಿನ ರಾಜಕಾರಣ ಜನರಿಗೆ ಗೊತ್ತಾಗಿದೆ.ಕೆಲವರು ಬಂಡೆ, ಹುಲಿಯಾ ಅಂತಾ ಸ್ವಘೋಷಿತ ನಾಯಕರಾದರು.ಬಂಡೆಯನ್ನ ಜನತೆ ಹುಡಿ ಮಾಡಿದ್ದಾರೆ.ಹುಲಿಯನ್ನ ಗೂಡಿಗೆ ಕಳುಹಿಸಿದ್ದಾರೆ ಎಂದರು.




ಸಿದ್ದರಾಮಯ್ಯನವರೇ ಹಗಲು ಕನಸು ಕಾಣೋದು ಬಿಡಲಿ.ಬಿಜೆಪಿಯಲ್ಲಿ ನಾಯಕತ್ವ ಪ್ರಶ್ನೆ ಉದ್ಭವಿಸಿಲ್ಲಮುಂದಿನ ಎರಡೂವರೆ ವರುಷ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದ ಅವರು
ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯ ಬೆಂಬಲಿಗ ಆ ಕಾರಣದಿಂದ ಡಿಕೆಶಿ ಬೆಂಬಲಿಗ ಸಂಪತ್ ಕುಮಾರ್ ಬೆಂಕಿ ಇಟ್ಟಿದ್ದಾರೆ.ಸಂಪತ್ ಕುಮಾರ್ ಅಡಗಿಸಿಡಲು ಡಿಕೆಶಿ ಸಹಾಯ ಮಾಡಿದ್ದಾರೆ.ದಲಿತ ಶಾಸಕನನ್ನ ರಕ್ಷಿಸಲಾಗದ ಕಾಂಗ್ರೆಸ್ ಸಂಪತ್ ಕುಮಾರ್ ರಕ್ಷಿಸಿದೆ ಎಂದರು.

ಬಂಟ್ವಾಳದಲ್ಲಿ ಕಾಂಗ್ರೆಸ್- SDPI ಹೊಂದಾಣಿಕೆ ಮಾಡಿಕೊಂಡಿರುವುದುಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ಮುಂದುವರಿದ ಭಾಗವಾಗಿದೆ.ಕಾಂಗ್ರೆಸ್- SDPI ಒಪ್ಪಂದದ ಒಂದು ಭಾಗವಾಗಿದೆ ಎಂದು ಟೀಕಿಸಿದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99