
ತಾನು ...ದೇಹ ತೋರಿಸಿದಳು, ಅವನಿಗೂ ತೋರಿಸೆಂದಳು; ಮುಂದೆ ನಡೆದದ್ದು ಇಂಟರೆಸ್ಟಿಂಗ್!
Thursday, November 12, 2020
(ಗಲ್ಫ್ ಕನ್ನಡಿಗ)ಮಂಗಳೂರು; ಫೇಸ್ ಬುಕ್ ನಲ್ಲಿ ಯುವತಿ ಯೋರ್ವಳು ಪರಿಚಯವಾಗಿ ಆಕೆಯ ನಾಟಕಕ್ಕೆ ಬಲಿಯಾದ ಯುವಕನೊಬ್ಬ ಹಣ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
(ಗಲ್ಫ್ ಕನ್ನಡಿಗ)ಸಾಕ್ಷಿರಾಜ್ ಎಂಬ ಯುವತಿ ಆಗಷ್ಟ್ ತಿಂಗಳಲ್ಲಿ ಯುವಕನೊಬ್ಬನನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಮೆಸೆಂಜರ್ ಮೂಲಕ ಆಕೆ ಆತನಿಗೆ ಪೊಟೋ ಕಳುಹಿಸುತ್ತಿದ್ದಳು. ಆ ಬಳಿಕ ಖರ್ಚಿಗೆಂದು ಈತನ ಬಳಿಯಿಂದ ಪೋನ್ ಪೇ ಮೂಲಕ ಪಡೆಯುತ್ತಿದ್ದಳು.
(ಗಲ್ಫ್ ಕನ್ನಡಿಗ)ಹೀಗೆ ಒಂದು ದಿನ ಈಕೆ ತನ್ನ... ಭಂಗಿಯನ್ನು ಮೆಸೆಂಜರ್ ಮೂಲಕ ಪ್ರದರ್ಶಿಸಿ ಆತನನಲ್ಲಿಯೂ ... ಭಂಗಿಯಲ್ಲಿರುವಂತೆ ಕೇಳಿಕೊಂಡಿದ್ದಾಳೆ. ಆತ ... ಭಂಗಿ ತೋರಿಸುತ್ತಿದ್ದಂತೆ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಆ ನಂತರ ಆಕೆ ತನ್ನ ಸಹಚರರಿಂದ ದೂರವಾಣಿ ಕರೆ ಮಾಡಿಸಿ ಆತನಿಂದ ಹಣ ಬೇಡಿಕೆಯನ್ನಿಟ್ಟು , ಹಣ ಕೊಡದಿದ್ದರೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸಿ ಹಣ ಪಡೆದು ಮೋಸ ಮಾಡಿದ್ದಾಳೆ. ಆಕೆಯಿಂದ ಹಣ ಕಳೆದುಕೊಂಡ ಯುವಕ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾನೆ
(ಗಲ್ಫ್ ಕನ್ನಡಿಗ)