
ಮಹಾರಾಷ್ಟ್ರದ ಕಾರು, ಕೇರಳದ ಯುವಕರು, ಆಂದ್ರಪ್ರದೇಶದಿಂದ ರವಾನೆ: ಕರ್ನಾಟಕದ ಮಂಗಳೂರಿನಲ್ಲಿ ಗಾಂಜಾ ಸಾಗಾಟಗಾರರ ಬಂಧನ!
(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ಇಕಾನಾಮಿಕ್ ಆಂಡ್ ನಾರ್ಕೋಟಿಕ್ ಕ್ರೈಂ ಠಾಣಾ ಪೊಲೀಸರು ಆಂದ್ರಪ್ರದೇಶದಿಂದ ಮಂಗಳೂರು ಮತ್ತು ಕೇರಳಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)ಇವರು ಮಹಾರಾಷ್ಟ್ರ ನೊಂದಾಣಿಯ (MH-12-KN-6119) ಕಾರಿನಲ್ಲಿ ಆಂದ್ರಪ್ರದೇಶದಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಕೇರಳದ ಕಾಸರಗೋಡಿನ ಇಬ್ರಾಹಿಂ ಮಡನ್ನೂರು ಮತ್ತು ಅಬ್ದುಲ್ ನಿಷಾದ್ ಬಂಧಿತರು. ಇವರನ್ನು ಪಡೀಲ್ ಜಂಕ್ಷನ್ ನಿಂದ ಬಿಕರ್ನಕಟ್ಟೆ ರಸ್ತೆಯಲ್ಲಿ ಪಡುಮರೋಳಿ ಸೂರ್ಯ ನಾರಾಯಣ ದೇವಸ್ಥಾನದ ಬಳಿ ಪೊಲೀಸರು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)ಇವರಿಂದ 24 ಕೆ ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 3.60 ಲಕ್ಷ ಆಗಿದೆ. ಇದರ ಜತೆಗೆ 2 ಲಕ್ಷ ಮೌಲ್ಯದ ಕಾರು, 13 ಸಾವಿರ ಮೌಲ್ಯದ 3 ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ
(ಗಲ್ಪ್ ಕನ್ನಡಿಗ)