ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಾಯಿಯನ್ನು ಹತ್ಯೆ ಮಾಡಿ ಮನೆಯೊಳಗೆ ನುಗ್ಗಲು ಯತ್ನ
ಮಂಗಳೂರು: ಮನೆಯೊಳಗೆ ನುಗ್ಗಿ ಅಪರಾಧ ಕೃತ್ಯ ನಡೆಸಲು ಯೊಜಿಸಿದ ತಂಡವೊಂದು ನಾಯಿಯನ್ನು ಚೂರಿಯಿಂದ ಹತ್ಯೆ ಮಾಡಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಓಂಕಾರ ನಿಲಯ ಎಂಬ ಮನೆಗೆ ನಾಲ್ವರು ಅಪರಿಚಿತರು ರಾತ್ರಿ ಎರಡು ಗಂಟೆಗೆ ನುಗ್ಗಲು ಬಂದಿದ್ದರು. ಮರಾಕಾಸ್ರ್ತಗಳನ್ನು ಹಿಡಿದು ಇವರು ಮನೆಗೆ ಅಕ್ರಮ ಪ್ರವೇಶ ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಮನೆಯ ಹೊರಗಿದ್ದ ನಾಯಿ ಬೊಗಳಿದ್ದು ಕಂಡ ದುಷ್ಕರ್ಮಿಗಳು ನಾಯಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಮನೆಯ ಹಿಂಬದಿಯ ಬಾಗಿಲನ್ನು ಒಎದು ಮನೆಯೊಳಗೆ ನುಗ್ಗಲು ಪ್ರಯತ್ನಿಸಿದಾಗ ಮನೆಯವರು ಎಚ್ಚರಗೊಂಡಿದ್ದಾರೆ. ಮನೆಯವರು ಜೋರಾಗಿ ಬೊಬ್ಬೆ ಹೊಡೆದಾಗ ಅಪರಿಚಿತರು ಪರಾರಿಯಾಗಿದ್ದಾರೆ. ನಾಲ್ವರು ಅಪರಿಚಿತರು ಕಾರಿನಲ್ಲಿ ದುಷ್ಕೃತ್ಯವೆಸಗಲು ಬಂದಿದ್ದರು ಎಂದು ಶುಭ ಚಂದ್ರರಾಜ ಎಂಬವರು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ