
ಸಪ್ತಪದಿ ಸಾಮೂಹಿಕ ವಿವಾಹಕ್ಕೆ ಚಿನ್ನದ ತಾಳಿ, ಗುಂಡು ಒದಗಿಸಲು ದರಪಟ್ಟಿ ಆಹ್ವಾನ
ಮಂಗಳೂರು :- ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, 8 ಗ್ರಾಂ ತೂಕದ ಚಿನ್ನದ ತಾಳಿ, ಗುಂಡು ಸಹಿತ ವಧುಗೆ ಒದಗಿಸಬೇಕಾಗಿರುವುದರಿಂದ ಸರ್ಕಾರದಿಂದ ಮಾನ್ಯತೆ ಪಡೆದ ಪರಿಣಿತ ಕೆಲಸಗಾರರಿಂದ ಕರ್ನಾಟಕ ಸರಕಾರ ಇ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ www.eproc.karnataka.gov.in ವೆಬ್‍ಸೈಟ್‍ನಲ್ಲಿ ದರಪಟ್ಟಿ ಆಹ್ವಾನಿಸಲಾಗಿದೆ.
ದರಪಟ್ಟಿಯನ್ನು ಸಲ್ಲಿಸಲು ಕೊನೆಯ ದಿನ ನವೆಂಬರ್ 25 ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ ಮಂಗಳೂರು ಅಥವಾ ದೂ.ಸಂ: 0824-2220590, 2220584 ಸಂಪರ್ಕಿಸುವಂತೆ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.