ತುಳು ನಟ ಸುರೇಂದ್ರ ಬಂಟ್ವಾಳ ಭೀಕರ ಹತ್ಯೆ- ಇವರು ಚಾಲಿಪೋಲಿಲು ಸಿನಿಮಾದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರಧಾರಿ
(ಗಲ್ಪ್ ಕನ್ನಡಿಗ)ಮಂಗಳೂರು: ತುಳು ಚಲನ ಚಿತ್ರ ಚಾಲಿಪೋಲಿಲು ಸಿನಿಮಾದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರ ಮಾಡಿದ್ದ ನಟ ಸುರೇಂದ್ರ ಬಂಟ್ವಾಳ ಅವರನ್ನು ಭೀಕರವಾಗಿ ಕೊಲೆಗೈಯ್ಯಲಾಗಿದೆ.
(ಗಲ್ಪ್ ಕನ್ನಡಿಗ)ಬಂಟ್ವಾಳದಲ್ಲಿರುವ ಬಸ್ತಿಪಡ್ಪುವಿನಲ್ಲಿ ಸುರೇಂದ್ರ ಬಂಟ್ವಾಳ ಅವರ ಹತ್ಯೆ ನಡೆದಿದೆ. ಬಸ್ತಿಪಡ್ಪುವಿನಲ್ಲಿರುವ ಮನೆಯಲ್ಲಿ ಸುರೇಂದ್ರ ಬಂಟ್ವಾಳ ಅವರ್ನನು ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಇಂದು ಮದ್ಯಾಹ್ನದವರೆಗೂ ಸುರೇಂದ್ರ ಬಂಟ್ವಾಳ ಮನೆಯ ಹೊರಗೆ ಬಾರದ ಕಾರಣ ಪರಿಶೀಲಿಸಿದಾಗ ಅವರು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಪ್ ಕನ್ನಡಿಗ)