ಮಂಗಳೂರಿನಲ್ಲಿ ತಿಂಗಳುಗಟ್ಟಲೆ ನಿಂತಿದ್ದ ಟಿಪ್ಪರ್ ಬೆಳ್ಳಂಬೆಳ್ಳಗೆ ಸಾವಿಗೆ ಕಾರಣವಾಯಿತು!
Wednesday, October 7, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನ ಮರೋಳಿಯಲ್ಲಿ ತಿಂಗಳುಗಟ್ಟಲೆ ಕೆಟ್ಟು ನಿಂತಿದ್ದ ಟಿಪ್ಪರ್ ಲಾರಿ ಯೊಂದು ಇಂದು ಮುಂಜಾನೆ ಓರ್ವನ ಸಾವಿಗೆ ಕಾರಣವಾಗಿದೆ.
(ಗಲ್ಫ್ ಕನ್ನಡಿಗ)ಈ ಟಿಪ್ಪರ್ ಹಲವು ಸಮಯಗಳಿಂದ ಹಳೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಸಮೀಪ ನಿಂತುಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ನಿಂತುಕೊಂಡಿದ್ದ ಈ ಲಾರಿಗೆ ಇಂದು ಮುಂಜಾನೆ ರಿಕ್ಷಾವೊಂದು ಢಿಕ್ಕಿ ಹೊಡೆದಿದೆ.
(ಗಲ್ಫ್ ಕನ್ನಡಿಗ)ಮಂಗಳೂರು ಬಂದರಿನಿಂದ ಮೀನು ಕೊಂಡೊಯ್ಯುತ್ತಿದ್ದ ರಿಕ್ಷಾ ನಿಯಂತ್ರಣ ತಪ್ಪಿ ಈ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ. ರಿಕ್ಷಾದಲ್ಲಿದ್ದ ವಳಚಿಲ್ ನ ಸಲೀಂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
(ಗಲ್ಫ್ ಕನ್ನಡಿಗ)ಘಟನೆಯ ಬಳಿಕ ಈ ಟಿಪ್ಪರ್ ಲಾರಿಯನ್ನು ತೆರವುಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಇದನ್ನು ಓದಿ; ಮಂಗಳೂರಿನಲ್ಲಿ 22 ವರ್ಷದ ಯುವತಿ ನಾಪತ್ತೆ !
(ಗಲ್ಫ್ ಕನ್ನಡಿಗ)