ಫರಂಗಿಪೇಟೆಯಲ್ಲಿ ಬಿಜೆಪಿ ಸ್ಥಳೀಯ ಮುಖಂಡ, ಪೊಟೋಗ್ರಾಫರ್ ಮೇಲೆ ತಲವಾರು ದಾಳಿ
Wednesday, October 28, 2020
(ಗಲ್ಫ್ ಕನ್ನಡಿಗ)
ಮಂಗಳೂರು; ಫರಂಗಿಪೇಟೆಯಲ್ಲಿ ಪುದು ಗ್ರಾಮದ ಬಿಜೆಪಿ ಮುಖಂಡ, ಪೊಟೋಗ್ರಾಫರ್ ರೊಬ್ಬರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
(ಗಲ್ಫ್ ಕನ್ನಡಿಗ)ಫರಂಗಿಪೇಟೆಯಲ್ಲಿರುವ ತೃಷಾ ಸ್ಟುಡಿಯೋ ಮಾಲೀಕ ದಿನೇಶ್ ಶೆಟ್ಟಿ ಅವರ ಮೇಲೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ. ತಲವಾರು ದಾಳಿಯಿಂದ ಗಾಯಗೊಂಡ ದಿನೇಶ್ ಶೆಟ್ಟಿ ಅವರನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ, ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್ , ಎಸ್ ಐ ಪ್ರಸನ್ನ ಭೇಟಿ ನೀಡಿದ್ದಾರೆ.
(ಗಲ್ಫ್ ಕನ್ನಡಿಗ)