-->

ಬಡ ಮಧ್ಯಮ ವರ್ಗದ ಕೈಗೆಟುಕದ ಆರೋಗ್ಯ: ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್ ಬಗ್ಗೆ ಒಂದು ಆತ್ಮಾವಲೋಕನ

ಬಡ ಮಧ್ಯಮ ವರ್ಗದ ಕೈಗೆಟುಕದ ಆರೋಗ್ಯ: ಆಸ್ಪತ್ರೆಗಳ ಬೇಕಾಬಿಟ್ಟಿ ಬಿಲ್ ಬಗ್ಗೆ ಒಂದು ಆತ್ಮಾವಲೋಕನ

ಮಾತೆ ಮಾಮ್ತಾಝ್ ರ ಕಥೆಯಲ್ಲಿ ನಾವು ಗಂಭೀರವಾಗಿ ಆಲೋಚಿಸುವ ವ್ಯಥೆ ಮತ್ತು ಚಿಂತೆ ಇದೆ
*Team B-Human Case 110* 

ಆಸ್ಪತ್ರೆಗಳ ಚಿಕಿತ್ಸೆ ಮೊತ್ತವು ಈಗ ಲಕ್ಷ ದಾಟುತ್ತಿದೆ. ಅದು ಒಂದು ಲಕ್ಷ ಅಥವಾ ಎರಡು ಲಕ್ಷಕ್ಕೆ ಸೀಮಿತವಾಗಿಲ್ಲ. ಹತ್ತು ಲಕ್ಷ ದಿಂದ ಮೇಲ್ಪಟ್ಟು ಬಿಲ್ಲ್ ಆಗುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಸಂಸಾರವನ್ನು ಕಂಗಾಲಾಗಿಸಿದೆ. ದಿನವು ನೂರಾರು ರೋಗಿಗಳು ಈ ಲಕ್ಷ ಬಿಲ್ಲಿನ ಭಯಂಕರ ಖಾಯಿಲೆಗೆ ಬಳಿಯಾಗಿ ಆಸ್ಪತ್ರೆಯ ಬೆಡ್ಡ್ ನಲ್ಲೇ ಕಾಲಕಳೆಯುವಂತಾಗಿದೆ. *ಪಸ್ಟ್ ನ್ಯೋರೊದಲ್ಲಿ* ಚಿಕಿತ್ಸೆ ಪಡೆದು ಕಳೆದ ಇಪ್ಪತ್ತು ದಿನದಿಂದ ಬಿಲ್ಲ್ ಮೊತ್ತ ಒಂಬತ್ತು ಲಕ್ಷ ರುಪಾಯಿ ಪಾವತಿಸಲು ಆಗದೆ ಆಸ್ಪತ್ರೆಯಲ್ಲಿ ಕಳೆಯುತ್ತಿರುವ ಮಮ್ತಾಝ್ ಶರೀಫ್ ಎಂಬ ಮಹಿಳೆಯ ಕರುಣಾಜಕ ಕಥೆ ಎಲ್ಲರೂ ಆತ್ಮಾವಲೋಕನ ಮಾಡುವಂತದ್ದು. 

ಮಮ್ತಾಝ್ ರವರಿಗೆ ಪಸ್ಟ್ ನ್ಯೂರೊದಲ್ಲಿ ಚಿಕಿತ್ಸೆ ಹೇಗೋ ಸಿಕ್ಕಿತು. ಒಟ್ಟು ಹತ್ತೊಂಬತ್ತು ಲಕ್ಷ ಬಿಲ್ ಮೊತ್ತ ನೋಡಿ ತಾಯಿಯನ್ನು ಅವರ ಹತ್ತಿರದವರೆಲ್ಲರೂ ನಿರ್ಲ್ಯಕ್ಷಿಸಿದರು. ಕರುಳ ಕುಡಿಗಳೂ ತಾಯಿಯ ಬಿಲ್ ಪಾವತಿಸಲು ಆಗದೆ ಆಸ್ಪತ್ರೆಯ ಕಡೆ ದಾವಿಸಿ ಬರಲಿಲ್ಲ. ಪತಿಯು, ಇದ್ದದ್ದೆಲ್ಲ ಮಾರಿ, ಸಾಲ ಮಾಡಿ ಹತ್ತು ಲಕ್ಷ ಬಿಲ್ಲ್ ಕಟ್ಟಿ, ಉಳಿದ ಒಂಬತ್ತು ಲಕ್ಷ ಹೊಂದಿಸಲು ಆಗದೆ
 ಆಸ್ಪತ್ರೆಯ ಗೇಟಿನ ಬಳಿ ನಿಂತು ರೋಧಿಸಲು ಆರಂಭಿಸಿದರು. ಇದನ್ನು ತಿಳಿದು *ಟೀಂ - ಬಿ ಹ್ಯೂಮನ್ ತಂಡ* ಮಮ್ತಾಝ್ ರವರ ಸ್ಥಿತಿಯನ್ನು ದಾನಿಗಳಿಗೆ ತಿಳಿಸಿತು. ತಕ್ಷಣ ಸ್ಪಂದಿಸಿದ ಹಲವು ದಾನಿಗಳ ಮೂಲಕ ಸುಮಾರು ಆರು ಲಕ್ಷ ರುಪಾಯಿಯನ್ನು ಪಸ್ಟ್ ನ್ಯೂರೋ ಆಸ್ಪತ್ರೆಗೆ ನೀಡಿ ತಾಯಿಯನ್ನು ಬಿಡುಗಡೆ ಗೊಳಿಸುವಂತೆ ಕೇಳಿಕೊಂಡಿತು. ಆಸ್ಪತ್ರೆಯ ಕಡೆಯಿಂದ ಒಂದುವರೆ ಲಕ್ಷ ರುಪಾಯಿ ರಿಯಾಯತಿಯನ್ನೂ ಟಿಂ- ಬಿ ಹ್ಯೂಮನ್ ತಂಡದ ಶಿಫಾರಸಿನ ಮೇರೆಗೆ ಮಾಡಲಾಗಿದೆ. ಹೀಗಿದ್ದೂ ಇನ್ನೂ ಬಾಕಿ ಇರುವ ಮೊತ್ತಕ್ಕೆ ಮಮ್ತಾಝ್ ರಿಗೆ ಮನೆಗೆ ಹೋಗುವ ಸೌಭಾಗ್ಯ ಸಿಕ್ಕಿಲ್ಲ. ಮೊದಲೇ ಬಹಳ ಯಾತನೆ ಅನುಭವಿಸುತ್ತಿರುವ ತಾಯಿ ತನ್ನ ಈ ಅಸಾಹಯಕ ಸ್ಥಿತಿಗೆ ಆಸ್ಪತ್ರೆಯ ಬೆಡ್ಡ್ ನಲ್ಲೇ ಕಣ್ಣೀರು ಹಾಕಿ ದಿನ ಕಳೆಯುವಂತಾಗಿದೆ. 

*ಟೀಂ ಬಿ ಹ್ಯೂಮೆನ್ ಮೂಲಕ ಆರು ಲಕ್ಷ ರುಪಾಯಿಯನ್ನು ಬಿಲ್ಲ್ ಮೊತ್ತಕ್ಕೆ ನೀಡಲು,  ಮೆಮೊನ್ ಗ್ರೂಪ್ ಒಂದು ಲಕ್ಷ ಎಪ್ಪತ್ತು ಸಾವಿರ ನೀಡಿದ್ದರೆ,  ಜಮೀಯತ್ತುಲ್ ಫಲಾಹ್ 25 ಸಾವಿರ ನೀಡಿತು.  ಭಟ್ಕಲ್ ಜಮಾಅತ್ 25 ಸಾವಿರ,  ಟೀಮ್ ಬಿ ಹ್ಯೂಮೆನ್  ಎರಡು ಲಕ್ಷ ಐವತ್ತು ಸಾವಿರ ರುಪಾಯಿ ನೀಡಿದೆ* ಇಷ್ಟಾಗಿಯೂ ತಾಯಿಯನ್ನು ಡಿಸ್ಚಾರ್ಜ್ ಮಾಡಲು ಸಾಧ್ಯವಾಗಿಲ್ಲ. ಈ ಸ್ಥಿತಿಯಲ್ಲಿ  ಟೀಂ ಬಿ ಹ್ಯೂಮೆನ್ ಡಿಸ್ಚಾರ್ಜ್ ಗೆ ಪ್ರಯತ್ನಿಸುತ್ತಿದ್ದರೂ ಪ್ರಸ್ತುತ ಹತ್ತಾರು ರೋಗಿಗಳ ದೈನಂದಿನ ಅವಶ್ಯಕೆತೆಯ ನಡುವೆ ಆರ್ಥಿಕ ಸಮಸ್ಯೆಯನ್ನೂ ಎದುರಿಸುತ್ತಿದೆ. ಪ್ರತೀ ದಿನವು ರೋಗಿಗಳ ಬಿಡುಗಡೆಗೆ ಕರೆಗಳು ಬರುತ್ತಿದೆ. ಲಕ್ಷಾಂತರ ರುಪಾಯಿ ಬಿಲ್ಲ್ ಹೇಗೆ ಬರಿಸುವುದು ? ಸಮುದಾಯವು ಬಹಳ ಗಂಭೀರವಾಗಿ ಆಲೋಚಿಸಬೇಕಾಗಿದೆ.
*ಆರೋಗ್ಯ ಜಾಗೃತಿ, ಆಸ್ಪತ್ರೆಯ ಚಿಕಿತ್ಸೆ ಮಾಹಿತಿಯನ್ನು ಮೊದಲೇ ಪಡೆಯಬೇಕು. ಈ ನಿಟ್ಟಿನಲ್ಲಿ ಪ್ರತೀ ಜಮಾಅತ್ ನಲ್ಲೂ ಜಾಗೃತಿ ಅಭಿಯಾನ ನಡೆಯಬೆಕು. ಈಗಾಗಲೇ ವೆಲ್ ನೆಸ್ಸ್ ಹಲ್ಪ್ ಲೈನ್ ಮೂಲಕವೂ ಆರೋಗ್ಯ ಮಾಹಿತಿ, ಚಿಕಿತ್ಸಾ ಮಾರ್ಗದರ್ಶನ ನೀಡುತ್ತಿದೆ. ಅದರ ಸದುಪಯೋಗವನ್ನೂ ಎಲ್ಲರೂ ಪಡೆದುಕೊಳ್ಳಬೇಕು ಎಂದು ಟೀಂ ಬಿ - ಹ್ಯೋಮೆನ್ ನ ಸ್ಥಾಪಕರಾದ ಆಸಿಫ್ ಡೀಲ್ಸ್ ವಿನಂತಿಸಿದ್ದಾರೆ*

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99