
ಸಮಸ್ಯೆ ಹೇಳಿದರೂ ನೀರಿಲ್ಲದ ಊರಿಗೆ ಹಾಕಬೇಕು ಎಂದು ಅಧಿಕಾರಿಯ ಮೇಲೆ ರೇಗಾಡಿದ ಬಿಜೆಪಿ ಶಾಸಕ ಸಂಜೀವ ಮಠಂದೂರು (video)
(ಗಲ್ಪ್ ಕನ್ನಡಿಗ)ಮಂಗಳೂರು: ಪುತ್ತೂರು ಶಾಸಕ , ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಅವರು ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ನೋಂದಾಣಿ ಅಧಿಕಾರಿಯ ಮೇಲೆ ರೇಗಾಡಿರುವ ವಿಡಿಯೋ ವೈರಲ್ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ವಿಟ್ಲ ಸಬ್ ರಿಜಿಸ್ಟ್ರಾರ್ ಕಚೇರಿಯ ನೋಂದಾಣಿ ಅಧಿಕಾರಿ ಕಚೇರಿಗೆ ತಡವಾಗಿ ಬರುತ್ತಾರೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಇಂದು ಉಪನೋಂದಾಣಿ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು. ಸ್ವಲ್ಪ ಹೊತ್ತು ಹೊರಗೆ ಕಾದು ಕಚೇರಿ ಒಳಗೆ ಬಂದ ಶಾಸಕ ಸಂಜೀವ ಮಠಂದೂರು ಅವರು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲಿದ್ದ ಜನರೆದುರೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಅವರು "ಸರಕಾರದ ಅನ್ನ ತಿಂದು ಇವರು ತೇಗುತ್ತಾ ಇದ್ದಾರೆ" ಎಂದು ಶಾಸಕ ಹೇಳಿದ್ದಕ್ಕೆ ಅಧಿಕಾರಿ ಅವರು "ನೀವು ಹಾಗೆ ಹೇಳಬೇಡಿ" ಎಂದಿದ್ದಾರೆ. ನಾನು ಒಂದು ತಿಂಗಳಿನಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ ಎಂದು ಶಾಸಕರು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿ ಆಪರೇಟರ್ ಇಲ್ಲ ಎಂಬ ಸಮಸ್ಯೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ನೀರಿಲ್ಲದಲ್ಲಿಗೆ ನಿಮ್ಮನ್ನು ಹಾಕಬೇಕು ಎಂದು ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
(ಗಲ್ಪ್ ಕನ್ನಡಿಗ)