Red alert ನ ಧೋ ಮಳೆಗೆ ನಲುಗಿದ ಮಂಗಳೂರು; ಜೆಪ್ಪಿನಮೊಗರುವಿನಲ್ಲಿ ನುಗ್ಗಿದ ನೀರು, ಕುಂಟಿಕಾನದಲ್ಲಿ ಅಪಾರ್ಟ್ಮೆಂಟ್ ಕಂಪೌಂಡ್ ಕುಸಿತ
Friday, September 11, 2020
(ಗಲ್ಫ್ ಕನ್ನಡಿಗ)ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮಳೆಯ ಮುನ್ನೆಚ್ಚರಿಕೆ ನೀಡಿದ
ಹವಾಮಾನ ಇಲಾಖೆ ಮುನ್ನೆಚ್ಚರಿಕೆಯಂತೆ ಧೋ ಮಳೆಗೆ ಮಂಗಳೂರು ನಲುಗಿದೆ.
(ಗಲ್ಫ್ ಕನ್ನಡಿಗ)ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಜೆಪ್ಪಿನಮೊಗರುವಿನಲ್ಲಿ ವಸತಿ ಸಮುಚ್ಚಯಕ್ಕೆ ನೀರು ನುಗ್ಗಿದ್ದು ಜನರು ನೀರಮಧ್ಯೆ ಮನೆಯಲ್ಲಿ ಕಳೆಯುತ್ತಿದ್ದಾರೆ. ಹಲವೆಡೆ ನೆರೆ ಸಂತ್ರಸ್ತರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಲಾಗಿದೆ.
(ಗಲ್ಫ್ ಕನ್ನಡಿಗ)ಮಂಗಳೂರಿನ ಕುಂಟಿಕಾನ ಬಳಿ ಅಪಾರ್ಟ್ ಮೆಂಟ್ ವೊಂದರ ಬೃಹತ್ ಕಾಂಪೌಂಡ್ ಕುಸಿದು ವಸತಿ ಸಮ್ಮುಚ್ಚಯ ಮತ್ತು ಸನಿಹದ ಮನೆಗಳು ಅಪಾಯಕ್ಕೆ ಸಿಲುಕಿದೆ.
(ಗಲ್ಫ್ ಕನ್ನಡಿಗ)