ಮೇರು ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನ; ಇಹಲೋಕದ ಯಾತ್ರೆ ಮುಗಿಸಿದ ಗಾನಗಂಧರ್ವ
Friday, September 25, 2020
(ಗಲ್ಫ್ ಕನ್ನಡಿಗ)ಮಂಗಳೂರು; ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
(ಗಲ್ಫ್ ಕನ್ನಡಿಗ)74 ವರ್ಷದ ಎಸ್ ಪಿ ಬಿ ಅವರನ್ನು ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಆಗಷ್ಟ್ 5 ರಂದು ಚೆನ್ನೈ ಎಂಜಿಎಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾದರೂ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಎಸ್ ಪಿ ಬಿ ಅವರು ದೇಶದ ವಿವಿಧ ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು. 1946 ಜೂನ್ ನಾಲ್ಕರಂದು ಆಂದ್ರಪ್ರದೇಶದ ನೆಲ್ಲೂರಿನ ಕೊನೆಟಮ್ಮಪೇಟದಲ್ಲಿ ಜನಿಸಿದ ಅವರು ನಾಲ್ಕು ಭಾಷೆಗಳಲ್ಲಿ ಆರು ರಾಷ್ಟ್ರಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, 25 ಬಾರಿ ಆಂದ್ರಪ್ರದೇಶದ ನಂದಿ ಪ್ರಶಸ್ತಿ, ವಿವಿಧ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಗೌರವಗಳು ಸಿಕ್ಕಿತ್ತು.
(ಗಲ್ಫ್ ಕನ್ನಡಿಗ)