ಡ್ರಗ್ ಹಗರಣದಲ್ಲಿ ರಾಗಿಣಿ ಜೈಲು ಪಾಲು: ಸೆಲೆಬ್ರಿಟಿ ತಂದೆ ಮಾಡಿದ್ದೇನು ಗೊತ್ತೇ...?
(ಗಲ್ಫ್ ಕನ್ನಡಿಗ)ಮಾದಕ ದ್ರವ್ಯದ ನಂಟಿನ ಆರೋಪದಿಂದ ತುಪ್ಪದ ಹುಡುಗಿ ರಾಗಿಣಿ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ.. ಸ್ಯಾಂಡಲ್ ವುಡ್ ತಲೆತಗ್ಗಿಸಿದ ಡ್ರ’ಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಕಳೆದ 10 ದಿನಗಳ ಹಿಂದೆ ನಟಿ ರಾಗಿಣಿಯ ಮನೆಯ ಮೇಲೆ ಸಿಸಿಬಿ ಪೋಲಿಸರು ರೇಡ್ ಮಾಡಿ ಆಕೆಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದರು. ಆ ಬಳಿಕ ಹಲವು ಸ್ಫೋಟಕ ವಿಚಾರಗಳು ಬಯಲಿಗೆ ಬರುತ್ತಿದೆ.

(ಗಲ್ಫ್ ಕನ್ನಡಿಗ)ಈ ಮಧ್ಯೆ, ವಿಚಾರಣೆಗೆ ಸಹಕರಿಸದೇ ಯಾವುದೇ ಮಾಹಿತಿಯನ್ನು ಬಾಯಿಬಿಡದ ಕಾರಣ ರಾಗಿಣಿ ಪೊಲೀಸ್ ಕಸ್ಟಡಿ ನಿನ್ನೆಯ ವರೆಗೂ ವಿಸ್ತರಣೆ ಗೊಂಡಿತ್ತು.. ರಾಗಿಣಿ ಮೊಬೈಲ್ ನಲ್ಲಿ ಡಿಲೀಟ್ ಆಗಿದ್ದ ಎಲ್ಲಾ ಡೇಟಾವನ್ನು ರಿಕವರ್ ಮಾಡಿಕೊಂಡ ಪೊಲೀಸರು ರಾಗಿಣಿಯಿಂದ ಸಾಕಷ್ಟು ಮಾಹಿತಿ ಪಡೆಕೊಂಡಿದ್ದರು. ರಾಗಿಣಿಯ ಪೊಲೀಸ್ ಕಸ್ಟಡಿ ಅಂತ್ಯಗೊಂಡ ದಿನ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಳಿಕ, ರಾಗಿಣಿಯನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವಂತೆ ಕೋರ್ಟ್ ಆದೇಶ ನೀಡಿತು..

(ಗಲ್ಫ್ ಕನ್ನಡಿಗ)ಈ ಹಿನ್ನೆಲೆಯಲ್ಲಿ ರಾಗಿಣಿಯನ್ನು ಮಹಿಳಾ ಸಾಂತ್ವಾನ ಕೇಂದ್ರದಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಯಿತು.. ಅತ್ತ ಇಷ್ಟು ದಿನ ಸಾಂತ್ವನ‌ ಕೇಂದ್ರದಲ್ಲಿ ಜೊತೆಯಾಗಿದ್ದ ನಟಿ ಸಂಜನಾ ಕಣ್ಣೀರು ಹಾಕಿ ರಾಗಿಣಿಯನ್ನು ಜೈಲಿಗೆ ಕಳುಹಿಸಿಕೊಟ್ಟರು.. ಇನ್ನು ರಾಗಿಣಿಯನ್ನು ಮಹಿಳೆಯರ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದ್ದು ಊಟಕ್ಕೆ ಚಪಾತಿ ಅನ್ನ ಸಾಂಬಾರ್ ನೀಡಲಾಗಿತ್ತು. ಆದರೂ ಊಟವನ್ನು ಬೇಡವೆಂದು ಕಣ್ಣೀರಿಟ್ಟಿದ್ದಾರೆ.. ಮಧ್ಯರಾತ್ರಿ ವರೆಗೂ ನಿದ್ರಿಸದೆ ಸುಮ್ಮನೆ ಕೂತಿದ್ದರು ಎನ್ನಲಾಗಿದೆ..

ಆಕೆಯ ತಂದೆ ಮಾಡಿದ್ದೇನು ಗೊತ್ತೇ..?

(ಗಲ್ಫ್ ಕನ್ನಡಿಗ)ತನ್ನ ಮಗಳು ಜೈಲು ಸೇರುತ್ತಿದ್ದಂತೆ ಇತ್ತ ರಾಗಿಣಿ ಅವರ ತಂದೆ ತೀವ್ರ ಅವಮಾನಕ್ಕೀಡಾಗಿದ್ದಾರೆ. ಅಕ್ಕಪಕ್ಕದವರ ಹೀಯಾಳಿಕೆ, ಬದಲಾದ ನಡವಳಿಕೆ ಹಾಗೂ ಅವಮಾನದಿಂದಾಗಿ ರಾಗಿಣಿ ಅವರ ಮನೆಯನ್ನು ತಂದೆ ಮಾರಾಟಕ್ಕೆ ಇಟ್ಟಿದ್ದಾರೆ. ಯಲಹಂಕದಲ್ಲಿ ಇರುವ ನ್ಯಾಯಾಂಗ ಬಡಾವಣೆಯಲ್ಲಿನ ಅನನ್ಯ ಅಪಾರ್ಟ್ ಮೆಂಟ್ ನಲ್ಲಿದ್ದ ರಾಗಿಣಿ ಅವರ ಮೂರು ಬೆಡ್ ರೂಮ್ ಇರುವ ಫ್ಲಾಟ್ ಅನ್ನು ಮಾರಾಟಕ್ಕೆ ಇಟ್ಟಿದ್ದಾರೆ.

(ಗಲ್ಫ್ ಕನ್ನಡಿಗ)ಇದಕ್ಕಾಗಿ ಖಾಸಗಿ ವೆಬ್ ಸೈಟ್ ನಲ್ಲಿ ಆ ಮನೆಯ ಭಾವಚಿತ್ರಗಳನ್ನು ಹಂಚಿಕೊಂಡಿದ್ದು, ಹೊಸ ಗ್ರಾಹಕರಿಗೆ ಎದುರು ನೋಡುತ್ತಿದ್ದಾರೆ.

(ಗಲ್ಫ್ ಕನ್ನಡಿಗ)ರಾಗಿಣಿ ದ್ವಿವೇದಿ ಅವರ ತಂದೆ ಮಾಜಿ ಯೋಧರೂ ಆಗಿದ್ದು ಸುತ್ತಮುತ್ತಲಿನವರು ಬಹಳ ಗೌರವ ನೀಡುತ್ತಿದ್ದರು.. ಆದರೆ ಮಗಳು ಮಾಡಿದ ಕೃತ್ಯದಿಂದ ತೀವ್ರ ಮನನೊಂದಿದ್ದಾರೆ. ಆಕೆಯನ್ನು ಅರೆಸ್ಟ್ ಮಾಡಿದ ನಂತರ ಅಕ್ಕಪಕ್ಕದವರ ನಡವಳಿಕೆಯೂ ಬದಲಾಗಿದೆ. ಇನ್ನಷ್ಟು ಅವಮಾನ ಬೇಡ ಎಂದು ತೀರ್ಮಾನಿಸಿ ಮನೆಯನ್ನು 2 ಕೋಟಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ..

(ಗಲ್ಫ್ ಕನ್ನಡಿಗ)ಜೊತೆಗೆ ಆರ್ಥಿಕವಾಗಿಯೂ ಕುಗ್ಗಿರುವ ದ್ವಿವೇದಿ ಕುಟುಂಬ ಮುಂದಿನ ರಾಗಿಣಿಯ ಖರ್ಚು ವೆಚ್ಛಗಳಿಗೆ ಲಾಯರ್ ಫೀಸ್ ಹೀಗೆ ಎಲ್ಲದಕ್ಕೂ ನೆರವಾಗಲೆಂದು ಮನೆಯನ್ನು ಎರಡು ಕೋಟಿಗೆ ಸೇಲ್ ಗೆ ಇಟ್ಟಿದ್ದಾರೆ ಎನ್ನಲಾಗಿದೆ. 

(ಗಲ್ಫ್ ಕನ್ನಡಿಗ)ಒಟ್ಟಿನಲ್ಲಿ ಗೌರವಯುತವಾಗಿ ಜೀವನ ನಡೆಸಬೇಕಿದ್ದ ಹಾಗೂ ಜೀವನಪೂರ್ತಿ ಗೌರವವಾಗಿ ಬಾಳಿ ಬದುಕಬೇಕಿದ್ದ ಅವರು ತನ್ನ ಸ್ವಂತ ಮಗಳಿಂದಾಗಿ ಪಡಬಾರದ ಪಾಡು ಅನುಭವಿಸುವಂತಾಗಿದೆ.

(ಗಲ್ಫ್ ಕನ್ನಡಿಗ)ಆಕೆ ಮಾಡಿದ ತಪ್ಪಿನಿಂದಾಗಿ ಪ್ರೀತಿಯಿಂದ ಕೊಂಡುಕೊಂಡಿದ್ದ ಮನೆಯನ್ನೇ ಮಾರುವಂತಾಯ್ತು.. ಸಿನಿಮಾ ಮೂಲಕ ಒಳ್ಳೆಯ ಹೆಸರು ಸಂಪಾದಿಸಿದ್ದರು.. ಆದರೆ ಅದ್ಯಾವ ಮೋಹಕ್ಕೆ ಬಿದ್ದು ಇಂತಹ ಕೆಲಸ ಮಾಡಿದರೋ ಆದರೆ ನೋವು ಮಾತ್ರ ಆ ತಂದೆ ತಾಯಿಗೆ.. ಶೋಕಿ ಮಾಡುವಾಗ ಜೊತೆಯಲ್ಲಿದ್ದವರು ಯಾರೂ ಸಹ ಇಂತಹ ಸಮಯದಲ್ಲಿ ಬರುವುದಿಲ್ಲ.. ಬದಲಾಗಿ ಈ ಸಮಯದಲ್ಲಿ ಕೋರ್ಟು ಅದು ಇದು ಅಂತ ಅಲೆಯುತ್ತಿರುವುದು ಆ ವಯಸ್ಸಾದ ತಂದೆ ತಾಯಿಯೇ.. ಅವರಿಗೆ ಇದು ಯಾವ ಕರ್ಮ? ಇದನ್ನು ಕೆಟ್ಟ ದಾರಿ ತುಳಿಯುವ ಆಲೋಚನೆ ಮಾಡುವ ಪ್ರತಿಯೊಬ್ಬರು ಅರಿಯಬೇಕಿದೆ..

(ಗಲ್ಫ್ ಕನ್ನಡಿಗ)