ಇಂದು ಬರಕ್ಕಾಗಲ್ಲ ಎಂದದಕ್ಕೆ ನಾಳೆ ಬರ್ಲೆಬೇಕು ಅಂತ ತುಪ್ಪದ ಹುಡುಗಿಗೆ ಬಿಸಿಮುಟ್ಟಿಸಿದ ಸಿಸಿಬಿ


(ಗಲ್ಫ್ ಕನ್ನಡಿಗ)ಬೆಂಗಳೂರು; ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯದ ಬೆನ್ನತ್ತಿರುವ ಪೊಲೀಸರು ತುಪ್ಪದ ಹುಡುಗಿ ರಾಗಿಣಿಗೆ ಬಿಸಿ ಮುಟ್ಟಿಸಿದ್ದಾರೆ.

(ಗಲ್ಫ್ ಕನ್ನಡಿಗ)ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ರಾಗಿಣಿ ದ್ವಿವೇದಿಗೆ ನೋಟಿಸ್ ನೀಡಿತ್ತು. ಆದರೆ ರಾಗಿಣಿ ದ್ವಿವೇದಿ ಇಂದು ವಿಚಾರಣೆಗೆ ಹೋಗಲು ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಹೋಗ್ತೇನೆ ಅಂತ ಟ್ವೀಟ್ ಮಾಡಿ ಸಿಸಿಬಿಗೆ ತಮ್ಮ ವಕೀಲರನ್ನು ಕಳುಹಿಸಿದ್ದರು. ಆದರೆ ಸಿಸಿಬಿ ನಾಳೆ ಹಾಜರಾಗ್ಲೆ ಬೇಕು ಅಂತ ರಾಗಿಣಿಗೆ ಬಿಸಿ ಮುಟ್ಟಿಸಿದೆ.

(ಗಲ್ಫ್ ಕನ್ನಡಿಗ)ಸಿಸಿಬಿಯ ವಾರ್ನಿಂಗನ್ನು ರಾಗಿಣಿ ಪಾಲಿಸ್ತಾರ ಎಂಬುದನ್ನು ಕಾದು ನೋಡಬೇಕಿದೆ.

(ಗಲ್ಫ್ ಕನ್ನಡಿಗ)