ಪುನೀತ್ ಶೆಟ್ಟಿ ಕಾಂಗ್ರೆಸ್ ಪಕ್ಷದ ಸದಸ್ಯರಲ್ಲ; ಪ್ರಕಟನೆ ನೀಡಿದ ಕಾಂಗ್ರೆಸ್
Tuesday, September 15, 2020
(ಗಲ್ಫ್ ಕನ್ನಡಿಗ)ಮಂಗಳೂರು: ಪುನೀತ್ ಶೆಟ್ಟಿ ಎಂಬವರು ಕಾಂಗ್ರೆಸ್ ಪಕ್ಷದ ಸದಸ್ಯರೆಂದು ಹೇಳಿಕೊಂಡು ಗೊಂದಲ ಮೂಡಿಸುತ್ತಿದ್ದು ಅವರು ಪಕ್ಷದ ಸದಸ್ಯರಲ್ಲ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಪ್ರಕಟನೆ ನೀಡಿದೆ.
(ಗಲ್ಫ್ ಕನ್ನಡಿಗ)ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಪ್ರಕಟನೆ ನೀಡಿದ್ದು ಪುನೀತ್ ಶೆಟ್ಟಿ ಕಾಂಗ್ರೆಸ್ ಪಕ್ಷದ ಸದಸ್ಯರೆಂದು ಹೇಳಿಕೊಂಡು ಗೊಂದಲ ಮೂಡಿಸುತ್ತಿದ್ದಾರೆ ಎಂಬುದು ಪಕ್ಷದ ಗಮನಕ್ಕೆ ಬಂದಿದೆ. ಅವರು ಪಕ್ಷದ ಸದಸ್ಯರಲ್ಲ. ಅವರು ನಡೆಸುವ ಯಾವುದೇ ಕಾರ್ಯಕ್ರಮಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಪುನೀತ್ ಶೆಟ್ಟಿ ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಪಕ್ಷವು ಜವಾಬ್ದಾರಿ ಯಲ್ಲ ಎಂದು ಅವರು ಸೃಷ್ಟೀಕರಣ ನೀಡಿದ್ದಾರೆ.
(ಗಲ್ಫ್ ಕನ್ನಡಿಗ)