ಮೂಲ್ಕಿ ಸುಂದರರಾಮ್ ಶೆಟ್ಟಿ ಹೆಸರು: ಸರ್ಕಾರದ ನಡೆಗೆ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ಹೀಗಿದೆ...
Thursday, September 24, 2020
ರಸ್ತೆಗೆ ತನ್ನ ಹೆಸರಿಡುವುದನ್ನು ಮೂಲ್ಕಿ ಸುಂದರ ರಾಮ ಶೆಟ್ಟಿ ಬಯಸಿರಲಿಕ್ಕಿಲ್ಲ. ವಿಜಯ ಬ್ಯಾಂಕ್ ವಿಸ್ತಾರವಾಗಿ ಬೆಳೆಸಬೇಕು, ಬಡವರ ಮನೆಯ ಸಾವಿರಾರು ವಿದ್ಯಾವಂತ ಯುವಜನರಿಗೆ ಉದ್ಯೋಗ ದೊರಕಬೇಕು, ಜನಸಾಮಾನ್ಯರಿಗೆ ಬ್ಯಾಂಕಿನ ಬಾಗಿಲು ತೆರೆದು ಅವರ ಸ್ವಾವಲಂಬಿ ಬದುಕಿಗೆ ವಿಜಯ ಬ್ಯಾಂಕ್ ಬೆಳಕಾಗಬೇಕು ಎಂಬುದು ಅವರ ಕನಸಾಗಿತ್ತು.
ಆದರೆ, ಬಿಜೆಪಿ ಸುಂದರ ರಾಮ ಶೆಟ್ಟಿ ರಕ್ತ, ಬೆವರು ಬಸಿದು ಕಟ್ಟಿದ ವಿಜಯ ಬ್ಯಾಂಕನ್ನು ಉತ್ತರ ಭಾರತದ ಬರೋಡ ಬ್ಯಾಂಕಿಗೆ ಧಾರೆಯೆರೆದು, ಪ್ರಧಾನ ಕಚೇರಿಯ ವಿಜಯ ಬ್ಯಾಂಕ್ ಬೋರ್ಡನ್ನು ಕಿತ್ತು ಹಾಕಿ, ಈಗ ಆ ರಸ್ತೆಗೆ ಸುಂದರ ರಾಮ ಶೆಟ್ಟಿಯ ಹೆಸರಿಟ್ಟಿದೆ. ಇದು ಸುಂದರ ರಾಮ ಶೆಟ್ಟರಿಗೆ ಮಾಡಿದ ಅವಮಾನ. ಅವರ ಕನಸುಗಳ ಸಮಾಧಿ. ಇಂದಿನ ರಸ್ತೆಯ ನಾಮಕರಣ ಕಾರ್ಯಕ್ರಮದ ಸಂಭ್ರಮ ಶೆಟ್ಟರು ಕಟ್ಟಿದ ವಿಜಯ ಬ್ಯಾಂಕಿನಲ್ಲಿ ಅವರು ಕಂಡಿದ್ದ ಕನಸುಗಳ ಅಂತ್ಯಕ್ರಿಯೆ. ನಾಚಿಕೆಯಾಗಬೇಕು ಬಿಜೆಪಿಗೆ.