
ಕಡಬದಲ್ಲಿ ಕಾಡಾನೆ ದಫನ್ ಮಾಡಿದ ಜಾಗಕ್ಕೆ ನಿತ್ಯ ಬರುತ್ತಿದೆ ಎರಡು ಕಾಡಾನೆ: ಮೂಕಪ್ರಾಣಿಯ ರೋಧನ
(ಗಲ್ಪ್ ಕನ್ನಡಿಗ)ಮಂಗಳೂರು: ಇತ್ತೀಚೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ ಕಾಡಾನೆಯನ್ನು ಧಪನ್ ಮಾಡಿದ ಜಾಗಕ್ಕೆ ಎರಡು ಕಾಡಾನೆಗಳು ಬರುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಕಡಬ ತಾಲೂಕಿನ ಕೊಂಬಾರು ಗ್ರಾಮದಲ್ಲಿ ಆಹಾರ ಅರಸಿ ಬಂದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶವಾಗಿ ಸಾವನ್ನಪ್ಪಿತ್ತು. ಸಾವನ್ನಪ್ಪಿದ ಈ ಕಾಡಾನೆಯನ್ನು ಅರಣ್ಯ ಇಲಾಖೆ ಧಫನ್ ಮಾಡಿತ್ತು.
(ಗಲ್ಪ್ ಕನ್ನಡಿಗ)ಇದೀಗ ಕಾಡಾನೆಯನ್ನು ಧಪನ್ ಮಾಡಿದ ಜಾಗಕ್ಕೆ ಎರಡು ಕಾಡಾನೆಗಳು ನಿತ್ಯ ಬರುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಕಾಡಾನೆಯನ್ನು ಧಪನ್ ಮಾಡಿದ ಜಾಗಕ್ಕೆ ಬರುವ ಮುಂಚೆ ಈ ಎರಡು ಕಾಡಾನೆಗಳು ಕೊಂಬಾರಿನ ಬೊಟ್ಟಡ್ಕ ಮೂಲಕವಾಗಿ ಬಂದು ಸ್ಥಳೀಯರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಬಳಿಕ ಕಾಡಾನೆಯನ್ನು ಧಪನ್ ಮಾಡಿದ ಸ್ಥಳಕ್ಕೆ ಹೋಗುತ್ತಿದೆ. ಕಾಡಾನೆಗಳು ಮುಗೇರಡ್ಕ ಶಾಲೆ ವಠಾರ ಸೇರಿದಂತೆ ಉರುಂಬಿ, ಪುತ್ತಿಲ, ಬಿಟ್ಟಡ್ಕ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಜನರು ಆತಂಕಕ್ಕೀಡಾಗಿದ್ದಾರೆ.