ವರ್ಣರಂಜಿತ ಜಾಹೀರಾತಿಗೆ ಮರುಳಾದ ಮೋಸ ಹೋದ: ಫೇಸ್‌ಬುಕ್ ವಿರುದ್ಧ ಸೈಬರ್ ಕ್ರೈಂಗೆ ದೂರು-ಫೇಸ್‌ಬುಕ್ ಜಾಹೀರಾತು ನೋಡಿ ಬೇಸ್ತುಬೀಳದಿರಿ...
Sunday, September 6, 2020
(ಗಲ್ಫ್ ಕನ್ನಡಿಗ)ಮಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಒಮ್ಮೆ ಕಣ್ಣಾಡಿಸಿದರೆ ಅಲ್ಲಲ್ಲಿ ಸ್ಪಾನ್ಸರ್ ಪೇಜ್ ಯಾ ಜಾಹೀರಾತು ನಿಮ್ಮ ಗಮನ ಸೆಳೆಯಬಹುದು.
(ಗಲ್ಫ್ ಕನ್ನಡಿಗ)ಇಂತಹ ಜಾಹೀರಾತುಗಳು ಅತ್ಯುತ್ತಮ ಪ್ರಾಡಕ್ಟ್ ಗಳನ್ನು ಅತಿ ಕಡಿಮೆ ಬೆಲೆಗೆ ನೀಡುವ ಆಶ್ವಾಸನೆ ನೀಡಬಹುದು. ಇದಕ್ಕೆ ನೀವು ಮರುಳಾದರೆ ನೀವು ಮೋಸ ಹೋದಂತೆ ಲೆಕ್ಕ..
(ಗಲ್ಫ್ ಕನ್ನಡಿಗ)ಹೌದು, ಇಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ವಕೀಲರೊಬ್ಬರು ಇಂತಹ ಜಾಹೀರಾತು ನೋಡಿ ಬೇಸ್ತು ಬಿದ್ದಿದ್ದಾರೆ. ಅಲ್ಲದೆ, ತಮ್ಮ ಹಣವನ್ನೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ಘಟನೆಯ ವಿವರ:
(ಗಲ್ಫ್ ಕನ್ನಡಿಗ)ಆಗಸ್ಟ್ ೨೭ರಂದು ಜಗದೀಶ ಎಂಬವರು (ಹೆಸರು ಬದಲಾಯಿಸಲಾಗಿದೆ) ಫೇಸ್ ಬುಕ್ ನೋಡುತ್ತಿದ್ದಾಗ ಅವರಿಗೆ ವರ್ಣರಂಜಿತ ಜಾಹೀರಾತೊಂದು ಗಮನ ಸೆಳೆಯಿತು. ಕಡಿಮೆ ಬೆಲೆಗೆ ಅತ್ಯುತ್ತಮ ಮೊಬೈಲ್ ಜಾಹೀರಾತಿಗೆ ಮರುಳಾದ ಅವರು ತಕ್ಷಣ ಅದನ್ನು ಬುಕ್ ಮಾಡಿದರು. ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನೂ ಪಾವತಿಸಿದರು.
(ಗಲ್ಫ್ ಕನ್ನಡಿಗ)ಆದರೆ, ಎರಡು ದಿನ ಕಳೆದರೂ ಯಾವುದೇ ಮೇಲ್ ಯಾ ಮೊಬೈಲ್ ಸಂದೇಶ ಬರದಿರುವುದನ್ನು ನೋಡಿ ತಾವು ಮೋಸಕ್ಕೊಳಗಾಗಿದ್ದೇನೆ ಎಂದು ಗೊತ್ತಾಗಿದೆ. ತಕ್ಷಣ, ಮಂಗಳೂರು ಪೊಲೀಸ್ ಆಯುಕ್ತರಿಗೆ ಇಮೇಲ್ ಸಂದೇಶದ ಮೂಲಕ ದೂರು ದಾಖಲಿಸಿದ್ದಾರೆ. ಆದರೆ, ಈ ದೂರಿಗೂ ಎರಡು ದಿನಗಳ ಕಾಲ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಈ ದೂರನ್ನು ಉಲ್ಲೇಖಿಸಿ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಿದ್ದಾರೆ.
ಈ ದೂರನ್ನು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸಿದ್ದಾರೆ.
ಜೋಕೆ.. ನೀವು ಜಾಗೃತರಾಗಿರಿ... ಫೇಸ್ ಬುಕ್ ಜಾಹೀರಾತು ನೋಡಿ ಬೇಸ್ತು ಬೀಳದಿರಿ...
(ಗಲ್ಫ್ ಕನ್ನಡಿಗ)