-->

ಶಾಸಕರ ಕಚೇರಿಯಲ್ಲೇ ಯುವತಿ ಜೊತೆ ಲವ್ವಿ ಡವ್ವಿ?: ಎಂಎಲ್‌ಸಿ ಪಿಎ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಶಾಸಕರ ಕಚೇರಿಯಲ್ಲೇ ಯುವತಿ ಜೊತೆ ಲವ್ವಿ ಡವ್ವಿ?: ಎಂಎಲ್‌ಸಿ ಪಿಎ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ


(ಗಲ್ಫ್ ಕನ್ನಡಿಗ)ಮಂಗಳೂರು: ರಾಜ್ಯದ ಪ್ರಮುಖ ಪ್ರಾದೇಶಿಕ ಪಕ್ಷದ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯರ ಮಂಗಳೂರು ಕಚೇರಿಯಲ್ಲಿ ನಡೆದ ಪ್ರಸಂಗವಿದು.

(ಗಲ್ಫ್ ಕನ್ನಡಿಗ)ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಇರುವ ಕಚೇರಿ ಇದು. ಡಿಸಿ ಕಚೇರಿಯ ಎಲ್ಲ ಆಫೀಸ್‌ಗಳು ಬಂದ್. ಈ ಕಚೇರಿಯೂ ಭಾನುವಾರ ಮುಚ್ಚಿತ್ತು. ಆದರೆ, ಒಳಗಡೆ ಒಬ್ಬ ಯುವಕ ಮತ್ತು ಒಬ್ಬ ಯುವತಿ ಒಟ್ಟು ಸೇರಿದ್ದರು. 

(ಗಲ್ಫ್ ಕನ್ನಡಿಗ)ಆಫೀಸ್ ಭಾನುವಾರ ಬಂದ್. ಆದರೂ ಮುಚ್ಚಿದ ಆಫೀಸ್ ಒಳಗೆ ಏನು ಕೆಲಸ? ಎಂಬ ಕುರಿತು ಸ್ಥಳೀಯರಿಗೆ ಸಂಶಯ ಬಂತು. ಈ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಈ ಕಚೇರಿಗೆ ದೌಡಾಯಿಸಿ ವಿಚಾರಣೆ ನಡೆಸಿದರು.

(ಗಲ್ಫ್ ಕನ್ನಡಿಗ)ನಗರದ ಹೃದಯಭಾಗದಲ್ಲಿ ಇರುವ ಈ ಕಚೇರಿಯಲ್ಲಿ ಭಾನುವಾರವೂ ಏನು ಕೆಲಸ ಇರಬಹುದು ಎಂಬ ಕುತೂಹಲ ಅಲ್ಲಿ ಸೇರಿದ್ದ ಜನರಿಗೆ ಇತ್ತು.

(ಗಲ್ಫ್ ಕನ್ನಡಿಗ)ಕೊನೆಗೆ ಇದು ಎಂಎಲ್‌ಸಿ ಅವರ ಕಚೇರಿ ಮ್ಯಾನೇಜರ್‌ ನ ಲವ್ ಸ್ಟೋರಿ ಎಂದು ಪೊಲೀಸರು ಈ ಪ್ರಕರಣಕ್ಕೆ ಮಂಗಳ ಹಾಡಿದರು. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದ್ದು, ಎಷ್ಟರಮಟ್ಟಕ್ಕೆ ಹೋಗಿತ್ತು ಎಂದರೆ ಇದೊಂದು ಲವ್ ಜಿಹಾದ್ ಆಗಿರಬಹುದು ಎಂಬ ಪ್ರಶ್ನೆಗಳೂ ಎದ್ದಿದ್ದವು.


(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99