ಸುಳ್ಯದಲ್ಲಿ ಬಾಲಕಿಯ ಸ್ನಾನದ ದೃಶ್ಯ ಮೊಬೈಲ್ ನಲ್ಲಿ ಸೆರೆ; ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಆರೋಪಿ ಮಾಡಿದ್ದು ಹೀಗೆ‌


(ಗಲ್ಫ್ ಕನ್ನಡಿಗ)ಸುಳ್ಯ; ಬಾಲಕಿಯ ಸ್ನಾನದ ದೃಶ್ಯವನ್ನು ಸೆರೆಹಿಡಿಯುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.


(ಗಲ್ಫ್ ಕನ್ನಡಿಗ)ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ     ಈ ಘಟನೆ ನಡೆದಿದೆ. ಕಲ್ಮಡ್ಕದ ಶ್ಯಾಮ್ ಎಂಬಾತ ಅಪ್ರಾಪ್ತ ಬಾಲಕಿ ಸ್ನಾನ ಮಾಡುತ್ತಿದ್ದ ವೇಳೆ ಸ್ನಾನದ ಕೊಠಡಿಯ ಹಿಂಬದಿಗೆ ಬಂದು  ಸ್ನಾನದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದ. ಇದನ್ನು ಬಾಲಕಿಯ ತಾಯಿ ಗಮನಿಸಿದ್ದು ಆತನ ಮೊಬೈಲ್ ಎಳೆಯಲು ಪ್ರಯತ್ನಿಸಿದ್ದಾರೆ. ಆತ ಮೊಬೈಲ್ ಎಳೆದುಕೊಂಡು ಪರಾರಿಯಾಗಿದ್ದಾನೆ. ಆತನ ಕೃತ್ಯದ ಬಗ್ಗೆ ಆತನ ತಂದೆಗೆ ಬಾಲಕಿಯ ತಂದೆ ತಿಳಿಸಿದ್ದಾರೆ.

(ಗಲ್ಫ್ ಕನ್ನಡಿಗ)ತಂದೆಗೆ ತಿಳಿಸಿದರೆಂದು ಆಕ್ರೋಶಗೊಂಡ ಯುವಕ ಬಾಲಕಿ ತಂದೆಗೆ ಹಲ್ಲೆ ಮಾಡಿದ್ದಾನೆ. ಆರೋಪಿ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ.

(ಗಲ್ಫ್ ಕನ್ನಡಿಗ)