ಹುಂಡಿ ಹಣಕ್ಕಾಗಿ ದೇವಸ್ಥಾನದಲ್ಲಿ 3 ಕೊಲೆ; ಬೆಚ್ಚಿಬಿದ್ದ ಜನತೆ
Friday, September 11, 2020
(ಗಲ್ಫ್ ಕನ್ನಡಿಗ)ಮಂಡ್ಯ: ಮಂಡ್ಯದಲ್ಲಿ ಹುಂಡಿ ಹಣಕ್ಕಾಗಿ ಮೂವರು ಅರ್ಚಕರನ್ನು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ)ಮಂಡ್ಯ ನಗರದ ಹೊರವಲಯದಲ್ಲಿರುವ ಅರ್ಕೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಈ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಆನಂದ (40), ಗಣೇಶ (55), ಪ್ರಕಾಶ (58 ) ಕೊಲೆಯಾದವರು. ಈ ಮೂವರು ಅರ್ಚಕರು ಅರ್ಚಕ ವೃತ್ತಿ ಜೊತೆಗೆ ರಾತ್ರಿ ಪಾಳಿಯಲ್ಲಿ ಕಾವಲುಗಾರರಾಗಿಯೂ ಕೆಲಸ ಮಾಡುತ್ತಿದ್ದರು.
(ಗಲ್ಫ್ ಕನ್ನಡಿಗ)ರಾತ್ರಿ ಮೂವರು ಅರ್ಚಕರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಹುಂಡಿ ಯನ್ನು ಹೊತ್ತೊಯ್ದಿದ್ದು ಜೊತೆಗೆ ಬೆಳ್ಳಿ, ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.
(ಗಲ್ಫ್ ಕನ್ನಡಿಗ)