-->
ads hereindex.jpg
ಮಹಾರಾಷ್ಟ್ರದಲ್ಲಿ ಒಳಹರಿವು ಹೆಚ್ಚಳ: ಎಚ್ಚರಿಕೆ ವಹಿಸಲು ಮನವಿ

ಮಹಾರಾಷ್ಟ್ರದಲ್ಲಿ ಒಳಹರಿವು ಹೆಚ್ಚಳ: ಎಚ್ಚರಿಕೆ ವಹಿಸಲು ಮನವಿ


(ಗಲ್ಪ್ ಕನ್ನಡಿಗ)ರಾಯಚೂರು- ಪ್ರವಾಹ ಬೀತಿ ಎದುರಿಸುತ್ತಿರುವ ನಾರಾಯಣಪೂರ ಅಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.


(ಗಲ್ಪ್ ಕನ್ನಡಿಗ)ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನದಿ ಪಾತ್ರದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿರುತ್ತದೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪೂರು ಜಲಾಶಯಕ್ಕೆ ಸುಮಾರು ೧೫,೦೦೦ ಕ್ಯೂಸೆಕ್ ಒಳಹರಿವು ಇದ್ದು, ಒಳಹರಿವು ಇನ್ನೂ ಹೆಚ್ಚಾಗುವ ಸಂಭವ ಇರುತ್ತದೆ. ಹಾಗೂ ಹವಾಮಾನ ಇಲಾಖೆಯ ವರದಿಯಂತೆ ಮುಂದಿನ ಮೂರು ದಿನಗಳಲ್ಲಿ ಕೃಷ್ಣ ನದಿ ಪಾತ್ರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿರುತ್ತಾರೆ.


ಆದರಿಂದ, ನಾರಾಯಣಪೂರು ಅಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ, ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಜಾಗ್ರತೆಯಿಂದ ಇರಲು ಹಾಗೂ ಸುರಕ್ಷತೆಗಾಗಿ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

suvidha.jpg

advertising articles 2

Advertise under the article

SNM4.jpeg CLICK-HERE