ಖಾಸಗಿ ಭೂ ಮಾಲೀಕರಿಂದ ಜಮೀನು ಖರೀದಿ: ಇಚ್ಛೆವುಳ್ಳ ಮಾಲೀಕರು ಸಂಪರ್ಕಿಸಿ
Thursday, August 6, 2020
(ಗಲ್ಪ್ ಕನ್ನಡಿಗ)ಕಲಬುರಗಿ:-ಪ್ರಧಾನಮಂತ್ರಿ ಆವ್ಹಾಸ್ ಯೋಜನೆಯಡಿ ಕಲಬುರಗಿ ನಗರ ಪ್ರದೇಶದಲ್ಲಿ ವಸತಿ/ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕಲಬುರಗಿ ನಗರದಿಂದ 10 ರಿಂದ 15 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಒಂದೇ ಕಡೇ 20 ರಿಂದ 50 ಎಕರೆ ಜಮೀನನ್ನು ಹೊಂದಿರುವ ಖಾಸಗಿ ಜಮೀನುದಾರರಿಂದ ಜಮೀನು ಖರೀದಿಸಲಾಗುತ್ತಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ರಾಹುಲ್ ತುಕಾರಾಂ ಪಾಂಡ್ವೆ ಅವರು ತಿಳಿಸಿದ್ದಾರೆ.
(ಗಲ್ಪ್ ಕನ್ನಡಿಗ)ಕಲಬುರಗಿ ಮಹಾನಗರ ಪಾಲಿಕೆಗೆ ಜಮೀನು ಮಾರಾಟ ಮಾಡಲಿಚ್ಛಿಸುವ ಖಾಸಗಿ ಜಮೀನುದಾರರು ತಮ್ಮ ಜಮೀನಿನ ದಾಖಲೆಗಳೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ವಸತಿ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಪಾಲಿಕೆಯ ವಸತಿ ಶಾಖೆಯ ಮುಖ್ಯಸ್ಥರ ಮೊಬೈಲ್ ಸಂಖ್ಯೆ 9900868278ಗೆ ಸಂಪರ್ಕಿಸಲು ಕೋರಲಾಗಿದೆ.