-->

ರಾಮನಾಮ ಭಜನೆಯಲ್ಲಿ ತಬಲಾ ಬಾರಿಸಿದ ಶಾಸಕ ವೇದವ್ಯಾಸ ಕಾಮತ್- ಬಿಜೆಪಿ ರಾಜ್ಯಾಧ್ಯಕ್ಷರ ತಾಳ!

ರಾಮನಾಮ ಭಜನೆಯಲ್ಲಿ ತಬಲಾ ಬಾರಿಸಿದ ಶಾಸಕ ವೇದವ್ಯಾಸ ಕಾಮತ್- ಬಿಜೆಪಿ ರಾಜ್ಯಾಧ್ಯಕ್ಷರ ತಾಳ!



(ಗಲ್ಪ್ ಕನ್ನಡಿಗ)ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಇಂದು ಮಂಗಳೂರಿನಲ್ಲಿ ವಿಶೇಷವಾಗಿ ಗಮನಸೆಳೆದರು.


(ಗಲ್ಪ್ ಕನ್ನಡಿಗ)ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಅಯೋಧ್ಯೆಗೆ ತೆರಳಿದ ಕರಸೇವಕರಿಗೆ ಅಭಿನಬಂದಿಸುವ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರು ಸಮಯಕ್ಕೆ ಸರಿಯಾಗಿ ಸಭಾಂಗಣಕ್ಕೆ ಬಂದಿದ್ದರು. ಆದರೆ ಆ ವೇಳೆ ಸಭಾಂಗಣದಲ್ಲಿ ಭಜನಾತಂಡದಿಂದ ರಾಮನಾಮ ಭಜನೆ ನಡೆಯುತ್ತಿತ್ತು.

ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


(ಗಲ್ಪ್ ಕನ್ನಡಿಗ)ಮೊದಲಿಗೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರು ನೆಲದಲ್ಲಿಯೆ ಕುಳಿತು ಭಜನೆಗೆ ಧ್ವನಿಗೂಡಿಸುತ್ತಾ ಚಪ್ಪಾಳೆಯ ತಾಳವನ್ನು ಹಾಕತೊಡಗಿದರು. ಇದಾದ ಕೆಲಹೊತ್ತಿನಲ್ಲಿಯೆ ಬಂದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ನಮಸ್ಕರಿಸಿ ಭಜನೆ ಹಾಡುತ್ತಿದ್ದ ತಂಡದಲ್ಲಿ ಸೇರಿಕೊಂಡರು. ತಬಲ ಬಾರಿಸುತ್ತಿದ್ದ ಕಲಾವಿದನಿಂದ ತಬಲಾ ತೆಗೆದುಕೊಂಡು ಭಜನೆಗೆ ತಬಲಾ ಬಾರಿಸತೊಡಗಿದರು. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಾಸಕರ ಭಜನಾ ಸೇವೆಯನ್ನು ಕಾರ್ಯಕ್ರಮಕ್ಕೆ ಬಂದಿದ್ದವರು ಕಣ್ತುಂಬಿಕೊಂಡರು.


(ಗಲ್ಪ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99