ಆಗಷ್ಟ್ 5 ಶ್ರೀರಾಮನ ಸ್ವಾತಂತ್ರ್ಯ ದಿನ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
(ಗಲ್ಪ್ ಕನ್ನಡಿಗ)ಮಂಗಳೂರು: ಆಗಷ್ಟ್ 15 ದೇಶಕ್ಕೆ ಸ್ವಾತಂತ್ರ್ಯ ದಿನವಾದರೆ ಕರಸೇವಕರಿಗೆ ಆಗಷ್ಟ್ 5 ಶ್ರೀರಾಮನ ಸ್ವಾತಂತ್ರ್ಯ ದಿನ. ಆಗಷ್ಟ್ 15 ರಷ್ಟೆ ಆಗಷ್ಟ್ 5 ಕೂಡ ಪವಿತ್ರವಾದದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
(ಗಲ್ಪ್ ಕನ್ನಡಿಗ)ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಾರ್ಯಾಲಯ ವಿಶ್ವ ಶ್ರೀಯಲ್ಲಿ 1991 ಮತ್ತು 1992 ರಲ್ಲಿ ಅಯೋಧ್ಯೆಗೆ ತೆರಳಿ ಕರಸೇವೆಯಲ್ಲಿ ಭಾಗವಹಿಸಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಲ್ಪ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಆಗುತ್ತಿರುವ ಈ ದಿನ ನಮ್ಮ ಜೀವನದ ಪುಣ್ಯ ದಿನವಾಗಿದೆ. ಈ ಐತಿಹಾಸಿಕ ದಿನದಂದು ನಮ್ಮ ಜೀವನ ಪಾವನವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಯೋಗೀಶ್ ಭಟ್, ವಿಹಿಂಪ ಮುಖಂಡ ಎಂ ಬಿ ಪುರಾಣಿಕ್ ಮೊದಲಾವರನ್ನು ಸನ್ಮಾನಿಸಲಾಯಿತು.
(ಗಲ್ಪ್ ಕನ್ನಡಿಗ)ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.