
ಬೆಂಗಳೂರು ಗಲಭೆ: ಗುಂಡೇಟಿನಿಂದ ಸತ್ತವರಿಗೆ ಪರಿಹಾರ ನೀಡಿದ್ರೆ ಹುಷಾರ್: ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಎಚ್ಚರಿಕೆ (video)
Thursday, August 13, 2020
(ಗಲ್ಫ್ ಕನ್ನಡಿಗ)ಮಂಗಳೂರು; ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದವರಿಗೆ ಪರಿಹಾರ ನೀಡಬಾರದು. ಎಸ್ ಡಿ ಪಿ ಐ ನವರು ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ ಪರಿಹಾರ ಕೊಟ್ಟರೆ ಹೋರಾಟ ನಡೆಸಬೇಕಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಯಾವುದೇ ಸರಕಾರಗಳು ಬೆಂಗಳೂರು ಗಲಭೆಯಲ್ಲಿ ಗುಂಡೇಟಿನಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ್ರೆ ಯಾವ ಸರಕಾರ ಎಂಬುದನ್ನು ನೋಡದೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರು ಗಲಭೆ, ಪಾದಾರಾಯಣಪುರ ಗಲಭೆ ಯನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ಬೆಂಗಳೂರಿನಲ್ಲಿ ಈ ರೀತಿಯ ಗಲಭೆ ನಡೆದಿದೆ. ಮಂಗಳೂರು ಗಲಭೆ, ಬೆಂಗಳೂರು ಗಲಭೆಯಲ್ಲಿ ಎಸ್ ಡಿ ಪಿ ಐ, ಪಿ ಎಫ್ ಐ ಪಾತ್ರವಿದೆ. ಈ ಕಾರಣದಿಂದ ಈ ಎರಡು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
(ಗಲ್ಫ್ ಕನ್ನಡಿಗ)ಮೂರು ದಿನಗಳ ಹಿಂದೆ ದೇಶದಲ್ಲಿ ಹಿಂಸಾಚಾರ ನಡೆಯಬಹುದೆಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದ್ದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿಲ್ಲ. ಇದರಿಂದ ಈ ರೀತಿ ಆಗಿದೆ ಎಂದು ಆಪಾದಿಸಿದರು.
(ಗಲ್ಫ್ ಕನ್ನಡಿಗ)ಬೆಂಗಳೂರು ಗಲಭೆಯನ್ನು ಎನ್ ಐ ಎ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು.
(ಗಲ್ಫ್ ಕನ್ನಡಿಗ)