ಮಾದಕ ವ್ಯಸನಿಯಾಗಿದ್ದ ಸುಶಾಂತ್, ರಿಯಾ?: ವಾಟ್ಸಾಪ್ ಚಾಟ್ ತಂದಿದೆ ಹೊಸ ಸಂಕಷ್ಟ!
ದಿನ ದಿನಕ್ಕೂ ರೋಚಕವಾಗುತ್ತಿರುವ ಸುಶಾಂತ್ ಮರ್ಡರ್ ಕೇಸ್
ಗೆಳತಿ ರಿಯಾಳಿಗೆ ಇತ್ತು ಮಾದಕ ಜಾಲದ ನಂಟು?
ವಾಟ್ಸಾಪ್ ಸಂದೇಶ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!
ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು
ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಬಹುದೊಡ್ಡ ತಿರುವು ಸಿಕ್ಕಿದ್ದು, ಬಾಲಿವುಡ್ ನಟಿ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ವಿರುದ್ಧ ಎನ್‍ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ವಸ್ತುಗಳ ನಿಯಂತ್ರಣ ಕಾಯ್ದೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇದೀಗ ಲಭ್ಯವಾಗಿರುವ ಹೊಸ ಸಾಕ್ಷ್ಯದ ಆಧಾರದಲ್ಲಿ ಮುಖ್ಯವಾದ ಕೊಂಡಿ ಸಿಕ್ಕಂತಾಗಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಇಡಿಯಲ್ಲಿ ರಿಯಾ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ವಿಚಾರಣೆಯನ್ನು ಸಹ ಎದುರಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡ್ರಗ್ಸ್ ಡೀಲರ್ ಜೊತೆ ರಿಯಾ ಸಂಪರ್ಕ ಹೊಂದಿರೋದನ್ನ ಪತ್ತೆ ಮಾಡಿದ್ದರು. ಈ ಹಿನ್ನೆಲೆ ಸುಶಾಂತ್ ಮತ್ತು ರಿಯಾ ನಡೆಸಿದ್ದ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ಫೋಟೋಗಳನ್ನ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)ಗೆ ವರ್ಗಾಯಿಸಿದ್ದರು. ಇಡಿ ಕಳುಹಿಸಿದ ದಾಖಲೆಗಳನ್ವಯ ಎನ್‍ಸಿಬಿ ಪ್ರಕರಣ ದಾಖಲಿಸಿಕೊಂಡಿದೆ.
ಸುಶಾಂತ್, ರಿಯಾ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದರೇ?
ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ಸ್ ನ ಮೂಲಕ ತಿಳಿದು ಬಂದಿರುವ ಪ್ರಕಾರ ಇದೊಂದು ಡ್ರಗ್ ವಹಿವಾಟಿನ ಸಂಚು ಎಂಬ ಶಂಕೆ ಬಲವಾಗುತ್ತಿದ್ದು, ಡ್ರಗ್ಸ್ ಬಗ್ಗೆ ಚಾಟ್ಸ್ ಮಾಡಿರುವ ರಿಯಾ ಸಂಭಾಷಣೆಯ ತಮಗೆ ಲಭ್ಯವಾಗಿರುವುದಾಗಿ ಜೀ ನ್ಯೂಸ್ ವರದಿ ಮಾಡಿದೆ.
ರಿಯಾ ಡಿಲೀಟ್ ಮಾಡಿರುವ ಚಾಟ್ಸ್ ನ ಮೂಲ ಪತ್ತೆಹಚ್ಚುವ ಮೂಲಕ ಬಹಳಷ್ಟು ಅಂಶ ಬೆಳಕಿಗೆ ಬಂದಿದೆ. ಮೊದಲ ಚಾಟ್ ರಿಯಾ ಮತ್ತು ಗೌರವ್ ಆರ್ಯ ನಡುವೆ ನಡೆದಿದ್ದು, ಆರ್ಯ ಡ್ರಗ್ ಮಾರಾಟಗಾರರನಾಗಿದ್ದ ಎಂಬುದಾಗಿ ವರದಿ ವಿವರಿಸಿದೆ.
ಚಾಟ್ ನಲ್ಲಿ ತಿಳಿಸಿರುವ ಪ್ರಕಾರ, ನಾವೀಗ ಹಾರ್ಡ್ (ವಿಪರೀತ ಅಮಲಿನ) ಡ್ರಗ್ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಆ ನಂತರ ನಾವು ಅದನ್ನು ಹೆಚ್ಚಾಗಿ ಬಳಸಲಿಲ್ಲ ಎಂಬ ಸಂದೇಶವನ್ನು ರಿಯಾ 2017ರ ಮಾರ್ಚ್ 8ರಂದು ಗೌರವ್ ಗೆ ಕಳುಹಿಸಿರುವ ತಿಳಿಸಿದ್ದಳು.
ಎರಡನೇ ಚಾಟ್ ಕೂಡಾ ರಿಯಾ ಮತ್ತು ಗೌರವ್ ನಡುವೆ ನಡೆದಿದ್ದು, ಈ ಪ್ರಕಾರ ರಿಯಾ ಗೌರವ್ ಬಳಿ ಕೇಳಿದ್ದು, ನಿಮ್ಮಲ್ಲಿ ಎಂಡಿ ಇದೆಯಾ?(ಅಂದರೆ ಮೆಥಿಲೀನ್ ಡಯಾಕ್ಸಿ ಮೆಧಾಂಫೆಟಮೈನ್ ಡ್ರಗ್) ಇದೊಂದು ತುಂಬಾ ಸ್ಟ್ರಾಂಗ್ ಆದ ಡ್ರಗ್ ಎಂದು ವರದಿ ವಿಶ್ಲೇಷಿಸಿದೆ.
ಇಡಿಯಿಂದ ಗೆಳತಿ ರಿಯಾ ವಿಚಾರಣೆ
ರಿಯಾರನ್ನ ವಿಚಾರಣೆಗೆ ಒಳಪಡಿಸಿದ್ದಾಗ ಇಡಿ ಅಧಿಕಾರಿಗಳ ನಾಲ್ಕು ಮೊಬೈಲ್, ಒಂದು ಐಪ್ಯಾಡ್ ಮತ್ತು ಲ್ಯಾಪ್‍ಟಾಪ್ ವಶಕ್ಕೆ ಪಡೆದುಕೊಂಡಿದ್ದರು. ನಾಲ್ಕು ಮೊಬೈಲ್ ಗಳಲ್ಲಿ ರಿಯಾ ಬಳಸುತ್ತಿದ್ದ ಎರಡು ಸೆಟ್ ಗಳಿದ್ದವು. ಮೊಬೈಲ್ ಗಳನ್ನು ಫೊರೆನಿಕ್ಸ್ ಲ್ಯಾಬ್ ಗೆ ಕಳುಹಿಸಿದ್ದಾಗ ರಿಯಾ ಮತ್ತು ಸುಶಾಂತ್ ನಡುವಿನ ಚಾಟ್ ಡ್ರಗ್ಸ್ ಜಾಲದ ಬಗ್ಗೆ ಮಾಹಿತಿ ನೀಡಿದ್ದವು. ಹೀಗಾಗಿ ಎನ್‍ಸಿಗೆ ಇಡಿ ಸುಧೀರ್ಘವಾದ ಪತ್ರ ಬರೆದು ಪ್ರಕರಣದ ಮಾಹಿತಿ ನೀಡಿತ್ತು. ಪತ್ರದಲ್ಲಿ ಎಂಡಿಎಂಎ ಡ್ರಗ್ಸ್, ಗಾಂಜಾ, ಎಲ್‍ಸಿಡಿ ಡ್ರಗ್ ಹೆಸರುಗಳನ್ನು ಇಡಿ ಉಲ್ಲೇಖಿಸಿತ್ತು. ಇದರ ಜೊತೆ ರಿಯಾ ವ್ಯವಹರಿಸುತ್ತಿದ್ದ ಕೆಲ ಡ್ರಗ್ ಡೀಲರ್ ಗಳ ಮೊಬೈಲ್ ನಂಬರ್ ಸಹ ನೀಡಿತ್ತು.
ರಿಯಾ ನಡೆಸಿದ ಚಾಟ್ ನಲ್ಲಿ ಚಹಾ ಅಥವಾ ಕಾಫಿ ಅಥವಾ ನೀರಿನಲ್ಲಿ ಒಂದೆರಡು ಹನಿ (ದ್ರವ ರೂಪದ ಡ್ರಗ್) ಸೇರಿಸಿ. 30 ರಿಂದ 40 ನಿಮಿಷದಲ್ಲಿ ಅದು ತನ್ನ ಕೆಲಸ ಆರಂಭಿಸುತ್ತದೆ ಎಂಬ ಸಂದೇಶ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸುಶಾಂತ್ ಸೇವಿಸುತ್ತಿದ್ದ ಪಾನೀಯಗಳಲ್ಲಿ ರಿಯಾ ಮಾದಕ ವಸ್ತು ಬೆರೆಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಇದರ ಜೊತೆಗೆ ಸಾಮ್ಯುಯೆಲ್ ಮಿರಾಂಡಾ ಮತ್ತು ರಿಯಾ ನಡುವೆ ನಡೆದ ಚಾಟ್ ಕೂಡಾ ಲಭ್ಯವಾಗಿರುವುದಾಗಿ ಜೀ ನ್ಯೂಸ್ ತಿಳಿಸಿದ್ದು, ಮಿರಾಂಡಾ ಚಾಟ್ಸ್ ನಲ್ಲಿ, ಹಾಯ್ ರಿಯಾ…ನಮ್ಮ ಸತ್ವ(ಡ್ರಗ್ಸ್) ಬಹುತೇಕ ಮುಗಿದು ಹೋಗಿದೆ. ಇದು 2020ರ ಏಪ್ರಿಲ್ 17ರಂದು ರಿಯಾ ಮತ್ತು ಸಾಮ್ಯುಯೆಲ್ ನಡುವೆ ನಡೆದ ಸಂಭಾಷಣೆ.
ನಂತರ ನಾವು ಶೋವಿಕ್ ಫ್ರೆಂಡ್ ಬಳಿ ಡ್ರಗ್ಸ್ ತೆಗೆದುಕೊಳ್ಳುವಾ? ಎಂಬುದಾಗಿ ಮಿರಾಂಡಾ ರಿಯಾ ಬಳಿ ಚಾಟ್ ನಲ್ಲಿ ಕೇಳಿದ್ದ. ಆದರೆ ಆತನ ಬಳಿ ಹ್ಯಾಶ್ ಮತ್ತು ಬಡ್ ಮಾತ್ರವೇ ಇದೆ. ಇಲ್ಲಿ ಹ್ಯಾಶ್ ಮತ್ತು ಬಡ್ ಅಂದರೆ ಕಡಿಮೆ ಅಮಲಿನ ಡ್ರಗ್ಸ್ ಪದಾರ್ಥ!
ಸುಶಾಂತ್ ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ(ಇಡಿ) ಕೂಡಾ ಡ್ರಗ್ಸ್ ಗೆ ಸಂಬಂಧಿಸಿದಂತೆ ನಡೆಸಿದ ವಾಟ್ಸಪ್ ಚಾಟ್ ನ ವಿವರನ್ನು ಬಹಿರಂಗಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಕೂಡಾ ರಿಯಾ ಮೊಬೈಲ್ ನಲ್ಲಿರುವ ಮಾಹಿತಿಯನ್ನು ಹಂಚಿಕೊಳ್ಳಲು ಇ.ಡಿ (ಜಾರಿ ನಿರ್ದೇಶನಾಲಯ) ಜತೆ ಕೈಜೋಡಿಸಲಿದೆ ಎಂದು ತಿಳಿಸಿದೆ.
ಸುಶಾಂತ್-ಡ್ರಗ್ ಡೀಲರ್ ಭೇಟಿ?
ತನಿಖೆಯ ವೇಳೆ ಜಾರಿ ನಿರ್ದೇಶನಾಲಯ ರಿಯಾಳ ಮೊಬೈಲ್ ಫೋನ್ ಗಳು ಹಾಗೂ ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡಿತ್ತು. ಇದಕ್ಕೂ ಮುನ್ನ ಸುಶಾಂತ್ ಸಿಂಗ್ ರಜಪೂತ್ ಸಾಯುವ ಮುನ್ನ ದುಬೈ ಮೂಲದ ಡ್ರಗ್ ಡೀಲರ್ ಅನ್ನು ಭೇಟಿಯಾಗಿರುವುದಾಗಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ರಿಯಾ ಅಮಾಯಕಿ: ವಕೀಲರ ವಾದ
ಏತನ್ಮಧ್ಯೆ ರಿಯಾ ಪರ ವಕೀಲ ಸತೀಶ್ ಮಾನ್ ಶಿಂಧೆ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ನಟಿ ರಿಯಾ ತನ್ನ ಜೀವನದಲ್ಲಿ ಯಾವತ್ತೂ ಡ್ರಗ್ಸ್ ಸೇವಿಸಿಲ್ಲ. ಯಾವುದೇ ಸಮಯದಲ್ಲಿಯೂ ರಿಯಾ ರಕ್ತ ಪರೀಕ್ಷೆಗೆ ಸಿದ್ಧ ಎಂದು ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ನಂತರ ಮುಂಬೈ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಆದರೆ ಎಫ್ ಐಆರ್ ಐ ದಾಖಲಿಸಿಕೊಂಡಿಲ್ಲವಾಗಿತ್ತು. ಇದೊಂದು ಆಕಸ್ಮಿಕ ಸಾವು ಎಂದು ತನಿಖೆ ನಡೆಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದರು. ಇದೀಗ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.