ಮಂಗಳೂರಿನ ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ತೂರಾಟ ಪ್ರಕರಣ,ನಿಷ್ಪಕ್ಷಪಾತ ತನಿಖೆಗೆ ಎಸ್.ಡಿ.ಪಿ.ಐ ಆಗ್ರಹ

 


(ಗಲ್ಪ್ ಕನ್ನಡಿಗ)ಮಂಗಳೂರು:-ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಅಝಾದ್ ಅಲ್ಪಸಂಖ್ಯಾತರ ಭವನಕ್ಕೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಶಾಂತಿಯಲ್ಲಿ ಇರುವ ಜಿಲ್ಲೆಯನ್ನು ಅಶಾಂತಿ ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದು ಪೋಲಿಸ್ ಇಲಾಖೆ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.


(ಗಲ್ಪ್ ಕನ್ನಡಿಗ)ದ.ಕ ಜಿಲ್ಲೆಯಲ್ಲಿ ಕೋಮುವಾದಿ ಮನಸ್ಥಿಯ ದುಷ್ಕರ್ಮಿಗಳು ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಪಡುತ್ತಿದ್ದು ಅದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ.

(ಗಲ್ಪ್ ಕನ್ನಡಿಗ)ಅಲ್ಪಸಂಖ್ಯಾತ ಭವನದ ಕಛೇರಿಯ ಪರಿಸರದಲ್ಲಿ ಸುತ್ತಮುತ್ತಲೂ ಅನೇಕ ಸಿಸಿ ಕ್ಯಾಮರಾಗಳಿದ್ದು ಅದೆಲ್ಲವನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು.

ಶಾಂತಿಯಲ್ಲಿರುವ ಜಿಲ್ಲೆಯ ಸಾಮರಸ್ಯವನ್ನು ಕದಡಲು ಕೆಲವೊಂದು ಶಕ್ತಿಗಳು ಶ್ರಮಿಸುತ್ತಿದೆ.ಹಾಗಾಗಿ ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಎಸ್ ಎಚ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.