-->
ದೆಹಲಿ ಗಲಭೆ ಸಂತ್ರಸ್ತರ ಪರ ವಕೀಲರಿಗೆ ಬೆದರಿಸುವ ಮೂಲಕ ಪೊಲೀಸರಿಂದ ನ್ಯಾಯದಾನಕ್ಕೆ ತಡೆ : ಪಾಪ್ಯುಲರ್ ಫ್ರಂಟ್

ದೆಹಲಿ ಗಲಭೆ ಸಂತ್ರಸ್ತರ ಪರ ವಕೀಲರಿಗೆ ಬೆದರಿಸುವ ಮೂಲಕ ಪೊಲೀಸರಿಂದ ನ್ಯಾಯದಾನಕ್ಕೆ ತಡೆ : ಪಾಪ್ಯುಲರ್ ಫ್ರಂಟ್


ಬೆಂಗಳೂರು : ದೆಹಲಿ ಗಲಭೆ ಪ್ರಕರಣಗಳನ್ನು ಅಲ್ಲಿನ ಪೊಲೀಸರು ನಾಶ ಮಾಡುತ್ತಿದ್ದು, ಗಲಭೆ ಸಂತ್ರಸ್ತರನ್ನು ಪ್ರತಿನಿಧಿಸುವ ನ್ಯಾಯವಾದಿಗಳಿಗೆ ಬೆದರಿಸುವ ಮೂಲಕ ನ್ಯಾಯದಾನಕ್ಕೆ ತಡೆಯಾಗುತ್ತಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒಎಂಎ ಸಲಾಂ ಹೇಳಿದ್ದಾರೆ. 

ಖ್ಯಾತ ಮಾನವ ಹಕ್ಕು ಹೋರಾಟಗಾರ ನ್ಯಾಯವಾದಿ ಮೆಹಮೂದ್ ಪ್ರಾಚ ವಿರುದ್ಧದ ಪೊಲೀಸರ ಆರೋಪಗಳ ತನಿಖೆಗೆ ದೆಹಲಿ ಕೋರ್ಟ್ ಆದೇಶಿಸಿದೆ. ಈ ಆರೋಪಗಳು, ಅವರು ದೆಹಲಿ ಗಲಭೆ ಸಂತ್ರಸ್ತರ ಪರವಾಗಿ ಕಾನೂನು ನೆರವು ನೀಡುವುದನ್ನು ತಡೆಯುವ ಉದ್ದೇಶವಿದೆ ಎಂದು ಅವರು ತಿಳಿಸಿದ್ದಾರೆ. 

ಒಂದೆಡೆ ದೆಹಲಿ ಗಲಭೆ ಸಂಚು ರೂಪಿಸಿ, ಜಾರಿಗೊಳಿಸಿದ ಹಿಂದುತ್ವ ಕ್ರಿಮಿನಲ್ ಗಳಿಗೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಮತ್ತು ಮತ್ತೊಂದೆಡೆ ಸಂತ್ರಸ್ತರಿಗೆ ಕಾನೂನು ನೆರವು ನೀಡುತ್ತಿರುವವರಿಗೆ ಬೆದರಿಕೆಯೊಡ್ಡುವ ಹಾಗೂ ಸಂತ್ರಸ್ತರ ವಿರುದ್ಧವೇ ಪ್ರಕರಣಗಳನ್ನು ಹೆಣೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದು ದೆಹಲಿ ಪೊಲೀಸರು ಕಾನೂನು ಜಾರಿ ಮಾಡುತ್ತಿರುವ ವಿಧಾನವಾಗಿದೆ ಎಂದು ಅವರು ಹೇಳಿದ್ದಾರೆ. 

ಇದಕ್ಕಿಂತಲೂ ಮಿಗಿಲಾಗಿ, ಘಟನೆಯ ಕುರಿತ ಒಂದು ಸ್ವತಂತ್ರ ಸತ್ಯಶೋಧನಾ ವರದಿಯ ಪ್ರಕಾರ, ಹಿಂಸಾಚಾರ ತಡೆಗೆ ದೆಹಲಿ ಪೊಲೀಸರು ಹೇಗೆ ಸಂಪೂರ್ಣ ವಿಫಲರಾಗಿದ್ದರು ಮತ್ತು ಬಲಪಂಥೀಯ ಹಿಂದೂತ್ವ ಗೂಂಡಾಗಳ ಜೊತೆಗೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬರುತ್ತದೆ ಎಂದು ಅವರು ತಿಳಿಸಿದ್ದಾರೆ. 

ಮೆಹಮೂದ್ ಪ್ರಾಚಾ ಜೊತೆ ಪಾಪ್ಯುಲರ್ ಫ್ರಂಟ್ ನಿಲ್ಲುತ್ತದೆ ಮಾತ್ರವಲ್ಲದೆ, ಸಂತ್ರಸ್ತರ ಜೊತೆ ನ್ಯಾಯಕ್ಕಾಗಿ ಕೊನೆಯ ಹಂತದ ವರೆಗೂ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article