ಬೆಳ್ತಂಗಡಿಯಲ್ಲಿ ಮಗನಿಂದಲೇ ತಂದೆಯ ಕೊಲೆ


(ಗಲ್ಫ್ ಕನ್ನಡಿಗ)ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಮಗನೆ ತಂದೆಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.

(ಗಲ್ಫ್ ಕನ್ನಡಿಗ) ಬೆಳ್ತಂಗಡಿಯಲ್ಲಿ ಜ್ಯೂನಿಯರ್ ಕಾಲೇಜ್ ಗ್ರೌಂಡ್ ರಸ್ತೆಯ ಮುಂಭಾಗದಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ವಾಸು ಮೂಲ್ಯ(70) ಎಂಬವರನ್ನು ಪುತ್ರ  ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದಾನೆ.

(ಗಲ್ಫ್ ಕನ್ನಡಿಗ) ವಾಸು ಅವರ ಪುತ್ರ ದಯಾನಂದ(37) ಈ ಕೃತ್ಯ ಎಸಗಿದವನು. 


(ಗಲ್ಫ್ ಕನ್ನಡಿಗ)ವಾಸು ಮೂಲ್ಯ  ಬೆಳಗ್ಗೆ ವಾಕಿಂಗ್ ಮಾಡುವ ವೇಳೆ  ಪುತ್ರ ಏಕಾಏಕಿ ದಾಳಿ ನಡೆಸಿ ಯದ್ವಾತದ್ವಾ ಕಡಿದು ಪರಾರಿಯಾಗಿದ್ದಾನೆ. ದಾಳಿಯಿಂದ ವಾಸು ಮೂಲ್ಯ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ