-->

ಹಲಸಿನ ಗಿಡಗಳ ರಾಯಾಭಾರಿ ಜಾಕ್ ಅನಿಲ್

ಹಲಸಿನ ಗಿಡಗಳ ರಾಯಾಭಾರಿ ಜಾಕ್ ಅನಿಲ್


ಇವತ್ತಿಗೆ ಜಾಕ್ ಅನಿಲ್ ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಂತಹ ಹಲಸಿನ ಗಿಡಗಳ ಸ್ಪೆಪಲಿಸ್ಟ್ . ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಕೃಷಿ ಮೇಳಗಳು ನಡೆದಾಗ ಅಲ್ಲಿ ಜಾಕ್ ಅನಿಲ್ ಇದ್ದೆ ಇರುತ್ತಾರೆ. ಅಂದರೆ ಮೇಳಗಳ ಸಂಘಟಕರು ಒತ್ತಾಯ ಮಾಡಿಯಾದರೂ ತಮ್ಮ ಕೃಷಿ ಮೇಳಕ್ಕೆ ಜಾಕ್ ಅನಿಲ್ ಅವರನ್ನು ಕರೆಸಿಕೊಳ್ಳುತ್ತಾರೆ.

ಅನಿಲ್ ಅವರು ಭಾಗವಹಿಸುವ ಕೃಷಿ ಮೇಳಗಳಲ್ಲಿ ಅವರು ಆ ಮೇಳಕ್ಕೆ ಒಂದು ಸ್ಟಾರ್ ಅಟ್ರಾಕ್ಷನ್ ತಂದು ಕೊಡುತ್ತಾರೆ. ಮೇಳಕ್ಕೆ ಬರುವ ಅಷ್ಟೂ ಜನರು ಅನಿಲ್ ಅವರ ಸ್ಟಾಲ್ ಗೆ ಭೇಟಿ ನೀಡಿಯೆ ನೀಡುತ್ತಾರೆ , ಮತ್ತೆ ಅವರ ಸ್ಟಾಲ್ ಎದುರುಗಡೆ ಜನಜಂಗುಳಿಯೇ ಇರುತ್ತದೆ.

ಕೇರಳದಂತಹ ರಾಜ್ಯಗಳಲ್ಲಿ ಅನಿಲ್ ಅವರು ಕೃಷಿ ಮೇಳದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಮಲಯಾಳಂ ಪತ್ರಿಕೆಗಳು ತಮ್ಮ ಪ್ರಾದೇಶಿಕ ಆವೃತ್ತಿಗಳಲ್ಲಿ ಅನಿಲ್ ಅವರ ಬಗ್ಗೆಯೇ ಪೂರ್ಣ ಪುಟದ ಸಪ್ಲಿಮೆಂಟ್ ಪ್ರಕಟಿಸುತ್ತವೆ.

ಅನಿಲ್ ಅವರು ಹಲಸಿನ ಗಿಡಗಳ ಮಾಹಾ ಎಕ್ಸ್ ಪರ್ಟ್ . ಯಾವ ಕೃಷಿ ವಿಶ್ವವಿದ್ಯಾಲಯ ಕೂಡ ಹಲಸಿನ ಗಿಡಗಳ ವಿಚಾರದಲ್ಲಿ ಅನಿಲ್ ಅವರ ಸಾಧನೆಗೆ ಸರಿಸಾಟಿಯಾಗದು. ದಕ್ಷಿಣ ಭಾರತದ ಹೆಚ್ಚಿನ ಕೃಷಿ ವಿಶ್ವವಿದ್ಯಾಲಯಗಳು ಹಲಸಿನ ಗಿಡಗಳ ವಿಷಯಕ್ಕೆ ಬಂದಾಗ ಅನಿಲ್ ಅವರನ್ನೇ ಅವಲಂಬಿಸುತ್ತವೆ. ಕರ್ನಾಟಕ , ಆಂದ್ರ ಪ್ರದೇಶದ ಕೃಷಿ ವಿಶ್ವವಿದ್ಯಾಲಯಗಳು ಅನಿಲ್ ಅವರನ್ನು ತಮ್ಮಲ್ಲಿಗೆ ಕರೆಸಿ ತಮ್ಮ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಪ್ರತ್ಯೇಕವಾದ ಹಲಸಿನ ಗಾರ್ಡನ್ ಗಳನ್ನು ನಿರ್ಮಿಸಿವೆ.

ಹೌದು ..ಅನಿಲ್ ಅವರ ನರ್ಸರಿಯಲ್ಲಿ 40 ವಿವಿಧ ತಳಿಯ ಹಲಸಿನ ಗಿಡಗಳಿವೆ. ಅವರು ಬೇರೆ ಬೇರೆ ಪ್ರದೇಶಗಳಿಂದ ಸಂಗ್ರಹಿಸಿದ ತಳಿಗಳು , ಅಭಿವೃದ್ಧಿ ಪಡಿಸಿದ ತಳಿಗಳು ಅವರಲ್ಲಿವೆ.

ಇನ್ನೂ ನೀವು ಪ್ರತ್ಯೇಕವಾಗಿ ಹಲಸಿನ ಗಾರ್ಡನ್ ಮಾಡುತ್ತೇವೆ , ಇನ್ನೂ ಹೆಚ್ಚಿನ ವಿಧದ ತಳಿಗಳು ಬೇಕು ಎಂದು ಹೇಳಿದರೆ ಅನಿಲ್ ಅವರು ಅದಕ್ಕೂ ಸೈ . ಬರೊಬ್ಬರಿ 100 ವೆರೈಟಿಯ ತಳಿಗಳನ್ನು ಸಿದ್ದಪಡಿಸಿಕೊಡುತ್ತಾರೆ...ಕೊಟ್ಟಿದ್ದಾರೆ ಕೂಡ .

ಹಲಸಿನ ಗಿಡಗಳ ಮಟ್ಟಿಗೆ ಅವರೆ ಒಂದು ನಡೆದಾಡುವ ...ಅಲ್ಲಲ್ಲ ..ಓಡಾಡುವ ವಿಶ್ವವಿದ್ಯಾನಿಲಯವಾಗಿದ್ದಾರೆ. ಒಂದು ನಿಮಿಷ ಸುಮ್ಮನೆ ಕೂರುವುದಿಲ್ಲ ಈ ಜನ .

ನಿಮಗೆ ಒಂದೂವರೆ ವರ್ಷದಲ್ಲಿ ಕಾಯಿ ಬಿಡುವ ಹಲಸಿನ ಗಿಡ ಬೇಕಿದ್ದರೆ , ಅನಿಲ್ ಅವರಲ್ಲಿಗೆ ಭೇಟಿ ನೀಡಿ , ಈ ಗಿಡಗಳು ಭರ್ತಿ ಒಂದೂವರೆ ವರ್ಷದಲ್ಲಿಯೇ ಫಲ ಕೊಡುತ್ತವೆ . ಈ ಗಿಡವನ್ನು ನಿಮ್ಮ ಗಾರ್ಡನ್ ನಲ್ಲಿಕೂಡ ನೆಡಬಹುದು. 12 ಅಡಿ ಎತ್ತರ ಮಾತ್ರ ಬೆಳೆಯುವ ಗಿಡ ಇದು.

ಇನ್ನೂ ವರ್ಷದ ಎಲ್ಲಾ ಸೀಸನ್ ಗಳಲ್ಲಿ ಕಾಯಿ ಬಿಡುವ ಹಲಸಿನ ಗಿಡಗಳು ಅವರಲ್ಲಿ ಲಭ್ಯವಿದೆ.

ಬೇಸಿಗೆ ಆರಂಭದಲ್ಲಿಯೇ ಕಾಯಿ ಆಗುವ ತಳಿಗಳು ಅವರಲ್ಲಿವೆ . ಹಲಸಿನ ಗಿಡಕ್ಕೆ ತುಂಬಾ ನೀರು ಕೊಡಬಾರದಂತೆ ಸಿಹಿ ಕಡಿಮೆಯಾಗುತ್ತದೆ ಎಂದು ಅನಿಲ್ ಅವರು ಸಲಹೆ ನೀಡಲು ಮರೆಯುವುದಿಲ್ಲ.

ನಿಮ್ಮ ಊರಿನ ನರ್ಸರಿಗಳಲ್ಲೂ ಈ ರೀತಿಯ ಹಲಸಿ ಗಿಡಗಳು ಕಾಣಿಸಿಕೊಂಡರೆ ಅದರ ಹಿಂದಿರುವ ಕೈ ಅನಿಲ್ ಅವರದ್ದೇ...ಅವರು ಎಲ್ಲೆಡೆಯ ನರ್ಸರಿಗಳಿಗೂ ವೈವಿಧ್ಯಮಯ ಹಲಸಿನ ತಳಿಗಳನ್ನು ಪೂರೈಕೆ ಮಾಡುವವರು. ಅದಕ್ಕಾಗಿಯೇ ಅವರು ' ಜಾಕ್ ಅನಿಲ್ '

ವರ್ಷಕ್ಕೆ ಒಂದು ಲಕ್ಷದಷ್ಟು ಹಲಸಿನ ಗಿಡಗಳನ್ನು ಅನಿಲ್ ಅವರು ಪೂರೈಸುತ್ತಾರೆ. ಈ ಬಾರಿ ಕೊರೊನಾ ಅವರಿಗೆ ಸಾಕಷ್ಟು ಪೆಟ್ಟು ಕೊಟ್ಟಿದೆ , ಸಿದ್ದಪಡಿಸಿದ ಗಿಡಗಳು ಬಾಕಿಯಾಗಿದೆ. ವನ ಮಹೋತ್ಸವ ಮಾಡುವವರು , ಪರಿಸರ ಕಾಳಜಿಯವರು , ರೈತರು , ಸಂಘ ಸಂಸ್ಥೆಗಳವರು , ಗಾರ್ಡನಿಂಗ್ ನಲ್ಲಿ ಆಸಕ್ತಿ ಇರುವವರು ಇವರನ್ನೊಮ್ಮೆ ಭೇಟಿಯಾಗ ಬೇಕು.

ಅನಿಲ್ ...ಜಾಕ್ ಅನಿಲ್ , ಮೂಲತಾ ಕೇರಳದವರು . ಆದರೆ ಈಗ ಅವರು ನಮ್ಮದೇ ದಕ್ಷಿಣ ಕನ್ನಡ ಜಿಲ್ಲೆಯರು. ಪುತ್ತೂರು ತಾಲೂಕಿನ ಕಬಕ ಜಂಕ್ಷನ್ ನಿಂದ ಎರಡೂ ಕಿಲೋಮೀಟರ್ ದೂರದಲ್ಲಿ ನಿನ್ನಿಕಲ್ಲು ಎಂಬಲ್ಲಿ ಅನಿಲ್ ಅವರ ನರ್ಸರಿ ಇದೆ .

ಇಪ್ಪತ್ತು ವರ್ಷಗಳಿಂದ ಅವರು ಹಲಸಿನ ಗಿಡಗಳ ರಾಯಾಭಾರಿಯಾಗಿದ್ದಾರೆ. ಅವರ ಮೊಬೈಲ್ ಸಂಖ್ಯೆ : 9448778497

ಬರಹ: ತಾರಾನಾಥ್ ಗಟ್ಟಿ ಕಾಪಿಕಾಡ್, ಹಿರಿಯ ಪತ್ರಕರ್ತರು

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99