
ಮಂಗಳೂರು ಪಾಲಿಕೆಗೆ ಅಕ್ಷಿ ಶ್ರೀಧರ್ ನೂತನ ಆಯುಕ್ತ; ಕೊನೆಗೂ ಬಂದ ಐಎಎಸ್ ಗ್ರೇಡ್ ಕಮೀಷನರ್!
Tuesday, August 25, 2020
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರು ಮಹಾನಗರ ಪಾಲಿಕೆಗೆ ಕೊನೆಗೂ ಐಎಎಸ್ ಅಧಿಕಾರಿಯೊಬ್ಬರು ಕಮೀಷನರ್ ಆಗಿ ನೇಮಕವಾಗಿದ್ದಾರೆ.
(ಗಲ್ಫ್ ಕನ್ನಡಿಗ)ಬೀದರ್ ಉಪ ವಿಭಾಗದ ಅಸಿಸ್ಟೆಂಟ್ ಕಮೀಶನರ್ ಆಗಿದ್ದ ಅಕ್ಷಿ ಶ್ರೀಧರ್ ಮಂಗಳೂರು ಪಾಲಿಕೆ ಕಮೀಷನರ್ ಆಗಿ ಸರಕಾರ ನೇಮಿಸಿದೆ.
(ಗಲ್ಫ್ ಕನ್ನಡಿಗ)ಮಂಗಳೂರು ಪಾಲಿಕೆಗೆ ಐಎಎಸ್ ಅಧಿಕಾರಿ ಕಮೀಷನರ್ ಆಗಬೇಕೆಂಬುದು ಹಲವರ ನಿರೀಕ್ಷೆಯಾಗಿತ್ತು. ಪಾಲಿಕೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ತೋರುವ ಅಧಿಕಾರಿಯೊಬ್ಬರು ಬೇಕಿತ್ತು. ಎಲ್ಲಾ ಪಾಲಿಕೆಗಳಲ್ಲೂ ಐಎಎಸ್ ಅಧಿಕಾರಿಗಳ ನೇಮಕವಾದರೆ ರಾಜಕೀಯ ಪ್ರಭಾವದಿಂದ ಇಲ್ಲಿಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಸರಕಾರಗಳು ಹಿಂದೇಟು ಹಾಕುತ್ತಿದ್ದವು.
ಇವರು ಮೂರನೇ ಐಎಎಸ್ ಅಧಿಕಾರಿ
(ಗಲ್ಫ್ ಕನ್ನಡಿಗ)ಮಂಗಳೂರು ಮಹಾನಗರ ಪಾಲಿಕೆಗೆ ಅಕ್ಷಿ ಶ್ರೀಧರ್ ಅವರು ಕಮೀಷನರ್ ಆಗಿ ಬಂದ ಮೂರನೇಯ ಐಎಎಸ್ ಅಧಿಕಾರಿ. ಮೊದಲನೆಯದಾಗಿ ಐಎಎಸ್ ಅಧಿಕಾರಿ ಶಮೀರ್ ಶುಕ್ಲಾ ಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಹೆಪ್ಸಿಬಾ ರಾಣಿ ಕೊರ್ಲಪಟಿ ಕಾರ್ಯನಿರ್ವಹಿಸಿದ್ದರು. ಹೆಪ್ಸಿಬಾ ರಾಣಿ ಕೊರ್ಲಪಟಿಯನ್ನು ಇಲ್ಲಿನ ರಾಜಕೀಯ ಲಾಭಿಗಳು ವರ್ಗಾವಣೆ ಮಾಡಿದ್ದವು. ಇದರ ನಡುವೆ ಕೆಲವು ಕೆ ಎ ಎಸ್ ಅಧಿಕಾರಿಗಳು , ಕೆಲವು ಕೆ ಎ ಎಸ್ ಅಲ್ಲದವರೂ ಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮೂರನೇ ಐಎಎಸ್ ಅಧಿಕಾರಿ ಅಕ್ಷಿ ಶ್ರೀಧರ್ ಪಾಲಿಕೆ ಕಮೀಷನರ್ ಆಗಿ ಬರುತ್ತಿದ್ದಾರೆ.