ವಿಮಾನ ಇಬ್ಬಾಗವಾದ್ರೂ ಪವಾಡಸದೃಶ್ಯವಾಗಿ ಬದುಕುಳಿದ ಪುಟ್ಟ ಕಂದಮ್ಮ


(ಗಲ್ಫ್ ಕನ್ನಡಿಗ)ಕೊಯಿಕೊಡ್;  ಕೇರಳದ ಕೊಯಿಕೊಡ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಪವಾಡಸದೃಶ್ಯವಾಗಿ ಪುಟ್ಟ ಕಂದಮ್ಮ ಬದುಕುಳಿದಿದೆ.

(ಗಲ್ಫ್ ಕನ್ನಡಿಗ)ವಿಮಾನ ದುರಂತದ ಬಳಿಕ ರಕ್ಷಣಾ ಕಾರ್ಯಚರಣೆಗಿಳಿದ ರಕ್ಷಣಾ ಸಿಬ್ಬಂದಿಗಳು ಪುಟ್ಟ ಮಗು ಅಳುತ್ತಿರುವ ಸದ್ದು ಕೇಳಿ ಅತ್ತ ತೆರಳಿದ್ದಾರೆ.  ಮಗುವಿನ ಅಳು ಸದ್ದು ಕೇಳಿದ ರಕ್ಷಣಾ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ. ವಿಮಾನ ದುರಂತದಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೊಂಡ್ರೊಟ್ಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

(ಗಲ್ಫ್ ಕನ್ನಡಿಗ)ನಿನ್ನೆ ಸಂಜೆ 7.45 ರ ಸುಮಾರಿಗೆ ದುಬೈನಿಂದ ಕೊಯಿಕ್ಕೋಡ್ ಗೆ ಬರುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನವಾಗಿತ್ತು.  ಇದರಲ್ಲಿ 10 ಪುಟ್ಟ ಕಂದಮ್ಮಗಳು ಸೇರಿದಂತೆ 191 ಪ್ರಯಾಣಿಕರಿದ್ದರು.