-->

ಶಾಲಾ ಮಕ್ಕಳಿಲ್ಲದೆ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನ

ಶಾಲಾ ಮಕ್ಕಳಿಲ್ಲದೆ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನ

ಶಾಲಾ ಮಕ್ಕಳಿಲ್ಲದೆ ನಡೆದ ಸ್ವಾತಂತ್ರ್ಯೋತ್ಸವ ಪಥಸಂಚಲನ

ತುಮಕೂರು
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 74 ನೇ  ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು  ಧ್ವಜಾರೋಹಣ ನೆರವೇರಿಸಿದರು.
ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಯಾರಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿರಲಿಲ್ಲ ಕೇವಲ ಪೊಲೀಸ್ ಇಲಾಖೆ ಸಿಬ್ಬಂದಿಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಎರಡ್ಮೂರು ವರ್ಷದಲ್ಲಿ ತುಮಕೂರು ಜಿಲ್ಲೆಯ ಗ್ರಾಮೀಣ
ಭಾಗ ಬದಲಾಗಲಿದೆ: ಜಿಲ್ಲಾ ಉಸ್ತುವಾರಿ ಸಚಿವ ಜೆಸಿ ಮಾಧುಸ್ವಾಮಿ........

 ತುಮಕೂರು ಜಿಲ್ಲೆಯ ಗ್ರಾಮೀಣ 
ಪ್ರದೇಶವು ಎರಡ್ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯ  ಬದಲಾವಣೆಯನ್ನು ಕಾಣಲಿದೆ ಎಂದು ಕಾನೂನು ಮತ್ತು ಸಂಸದೀಯ 
ವ್ಯವಹಾರಗಳು, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಜೆ.ಸಿ.ಮಾಧುಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ 
ಆಯೋಜಿಸಿದ್ದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಆರ್ಥಿಕ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಸಮಾನತೆ ಸಾಧಿಸಿದ್ದರೂ,  ಸಾಮಾಜಿಕವಾಗಿ ಸಮಾಜ ನಿರ್ಮಾಣಕ್ಕೆ ಇನ್ನೂ ಬಹುದೂರ ಸಾಗಬೇಕಾಗಿದೆ. 
ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಕೆಲಸ 
ಆಗಬೇಕಾಗಿದೆ ಎಂದರು.

ಸ್ವಾತಂತ್ರ ಬಂದು 73ವರ್ಷಗಳು ಕಳೆದಿದ್ದರೂ ಜಾತಿ ರಹಿತ ಸಮಾಜ ನಿರ್ಮಾಣದತ್ತ ಕೊಂಚ ಕೆಲಸಗಳಾಗಿದ್ದರೂ, ವರ್ಗರಹಿತ 
ಸಮಾಜ ನಿರ್ಮಾಣ ಮಾಡುವಲ್ಲಿ ಹಿಂದೆ ಬಿದ್ದಿದ್ದೇವೆ. ಬಡವ, ಬಲ್ಲಿದ, ಮೇಲು, ಕೀಳು ಎಂಬ ಭಾವನೆ ಜನರಿಂದ ಇನ್ನೂ ದೂರವಾಗಿಲ್ಲ.ವೃತ್ತಿಗೌರವ 
ದೊರೆಯುವ ಜೊತೆಗೆ, ಶ್ರಮಕ್ಕೆ ತಕ್ಕ ಬೆಲೆ ದೊರೆಯುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲಾ 
ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನ ನಡೆಸಿವೆ.  ದೇಶವನ್ನು ಅಭಿವೃದ್ದಿಯತ್ತ ತೆಗೆದುಕೊಂಡು ಹೋಗಲು  ಪ್ರಯತ್ನ ನಡೆಸಿವೆ ಎಂದು ಅವರು ಹೇಳಿದರು.

ಕರ್ನಾಟಕ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. 
ಇದಕ್ಕೆ ಕಾರಣ ಕಳೆದ ಎರಡು ವರ್ಷಗಳ ಹಿಂದೆ ಪಾವಗಡ ಸೇರಿದಂತೆ ರಾಜ್ಯದ ವಿವಿಧೆಡೆ ನಿರ್ಮಾಣವಾಗಿರುವ ಸೋಲಾರ್ ಪಾರ್ಕ್‍ಗಳೇ 
ಕಾರಣ. ಇದೇ ನಿಟ್ಟಿನಲ್ಲಿ ರೈತ ಪಂಪ್‍ಸೆಟ್‍ಗಳಿಗೂ ಸೋಲಾರ್  ಅಳವಡಿಸುವ ಪ್ರಕ್ರಿಯೆ ಬಹಳ ವೇಗವಾಗಿ ನಡೆದಿದೆ. ಸ್ವಚ್ಚತೆ,  ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೇಮಾವತಿ, 
ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಮೂಲಕ ಜಿಲ್ಲೆಯ ಎಲ್ಲಾ  ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಪ್ರಕ್ರಿಯೆ  ಚಾಲನೆಯಲ್ಲಿದೆ. ಮುಂದಿನ ಮೂರು ವರ್ಷಗಳಲ್ಲಿ ಜಿಲ್ಲೆ ಹಸಿರುಮಯವಾಗಲಿದ್ದು, ರೈತರ ಮೊಗದಲ್ಲಿ ಮಂದಹಾಸ 
ಮೂಡಲಿದೆ ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಬೆಂಗಳೂರು ನಗರ ಮತ್ತು ಗ್ರಾಮಾಂತರ 
ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯ ಇತರೆ ಜಿಲ್ಲೆಗಳನ್ನು ಬಿ  ಮತ್ತು ಸಿ ವಲಯಗಳನ್ನಾಗಿ ವಿಂಗಡಿಸಿದ್ದು, ಸ್ಥಳೀಯ ಕಚ್ಚಾ  ವಸ್ತುಗಳ ಲಭ್ಯತೆಯನ್ನಾಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಅದೇ ರೀತಿ 
ತುಮಕೂರು ಜಿಲ್ಲೆಯಲ್ಲಿ ತೆಂಗು ಆಧಾರಿತ ಕೈಗಾರಿಕೆಗಳನ್ನು  ಸ್ಥಾಪಿಸಲು ಕೇರಳದ ಹಣಕಾಸು ಸಚಿವರು ಹಾಗೂ ತೆಂಗು ಸಚಿವರ 
ಸಂಪರ್ಕದಲ್ಲಿದ್ದು, ವಿಭಿನ್ನ ರೀತಿಯ ತೆಂಗು ಆಧಾರಿತ 
ಕೈಗಾರಿಕೆಗಳನ್ನು ಸ್ಥಾಪಿಸಲು ಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ತುಮಕೂರು ನಗರಕ್ಕೆ ಬುಗುಡನಹಳ್ಳಿ ಕೆರೆಯಿಂದ ಮಾತ್ರ  ನೀರು ಪೂರೈಸಲಾಗುತ್ತಿದೆ. ಇನ್ನು 2 ಕೆರೆಗಳಿಂದ ತುಮಕೂರು ನಗರಕ್ಕೆ ನೀರು ಪೂರೈಸಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾದ ನೀರು ತುಮಕೂರು 
ನಗರಕ್ಕೆ ಪೂರೈಕೆಯಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರಿಗೆ ನಿವೇಶನ, ವಸತಿ, ಕುಡಿಯುವ ನೀರು, ನರೇಗಾ ಯೋಜನೆಯಡಿ ದುಡಿಯುವ  ಕೈಗಳಿಗೆ ಕೆಲಸ ಹೀಗೆ, ಹತ್ತಾರು ಕಾರ್ಯಕ್ರಮಗಳನ್ನು ಸರ್ಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ. ಈ ಮೂಲಕ 
ಗ್ರಾಮೀಣ ಜನರು ಸ್ವಾಲಂಭನೆಯಿಂದ ಬದುಕವಂತಾಗಬೇಕು ಎಂದು 
ಅವರು ತಿಳಿಸಿದರು.

ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳು ಮೊದಲು 
ನಿವೇಶನ ರಹಿತರನ್ನು ಹುಡುಕಿ ಅವರಿಗೆ ನಿವೇಶನ ನೀಡಬೇಕು. ನಿವೇಶನ ಇಲ್ಲದವರಿಗೆ ವಸತಿ ನೀಡಿದರೆ ವಸತಿ ಯೋಜನೆ ಸಫಲವಾಗುವುದಿಲ್ಲ. ಬರುವ 3-4 ತಿಂಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ 
ಎಂದು ಅವರು ತಿಳಿಸಿದರು.

ಅಟಲ್ ಭೂಜಲ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ರೂಪಿಸಿರುವ ಮಾದರಿಯು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಈ 
ಯೋಜನೆಯ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ 2 ಬಾರಿ ರಾಜ್ಯವನ್ನು ಶ್ಲಾಘಿಸಿದೆ ಎಂದ ಅವರು, ಪ್ರಧಾನ ಮಂತ್ರಿಗಳ ಆಶಯದಂತೆ ಮನೆ-
ಮನೆಗೆ ನೀರು ನೀಡುವ ಜಲಜೀವನ್ ಮಿಷನ್ ಮುಂದಿನ 3 ವರ್ಷಗಳಲ್ಲಿ 
ಅನುಷ್ಠಾನಗೊಂಡು, ಗ್ರಾಮೀಣ ಪ್ರದೇಶದಲ್ಲಿ ಪರಿಶುದ್ಧ ಕುಡಿಯುವ ನೀರು ಲಭಿಸಲಿದೆ ಎಂದರು.

 ಸಮಾರಂಭದಲ್ಲಿ ಜಿಲ್ಲೆಯ ವಸತಿ ಶಾಲೆಗಳಲ್ಲಿ 2019-20ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 
ಶಿರಾ ತಾಲೂಕು ಭುವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಾದ ಬಿ.ಪುಪ್ಪಲತ(621-99.36%) ಹಾಗೂ ವೈ.ಆರ್. 
ಪ್ರಿಯದರ್ಶಿನಿ(615-98.40%); ಪಾವಗಡ ತಾಲೂಕು ಕೊಡಿಗೆಹಳ್ಳಿ , ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಿ.ವೆಂಕಟೇಶ ಪ್ರಸನ್ನ 
ಕುಮಾರ್(618-98.88%) ತುರುವೇಕೆರೆ ತಾಲ್ಲೂಕಿನ 
ಗುಡ್ಡೇನಹಳ್ಳಿಯ ಮೋರಾರ್ಜಿ ದೇಸಾಯಿ ವಸತಿ ಶಾಲೆಯ 
ಡಿ.ಸಿಂಚನ(618-98.88%) ಹಾಗೂ ಹೆಚ್.ಆರ್ ಪ್ರಿಯಾಂಕ(615-98.40%) 
ಸನ್ಮಾಸಿಲಾಯಿತು.

ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನ:- 
ಜಿಲ್ಲಾ ಆರೋಗ್ಯ ಮತ್ತು 
ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾಸ್ಪತ್ರೆಯಲ್ಲಿ 
ಕಾರ್ಯನಿರ್ವಹಿಸುತ್ತಿರುವ ವೈದ್ಯರು/ಸಿಬ್ಬಂದಿಗಳಾದ ಅರಿವಳಿಕೆ 
ತಜ್ಞರಾದ ಡಾ|| ರಮ್ಯ, ಡಾ|| ಚಂದ್ರಶೇಖರ್, ಎದೆರೋಗ ತಜ್ಞ ಡಾ|| 
ಯಶವಂತ್, ಶುಶ್ರೂಷಕಿ ಚಂದ್ರ, ಕ್ಷ-ಕಿರಣ ತಂತ್ರಜ್ಞ ನಳಿನಾ, 
ಗ್ರೂಪ್ ಡಿ ಮನೋಜ್, ಕುಣಿಗಲ್ ಪೊಲೀಸ್ ಠಾಣೆ ಹೆಡ್ ಕಾನ್ಸ್‍ಟೇಬಲ್ 
ನಟರಾಜು, ತುಮಕೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ 
ರಂಗನಾಥ್, ಪೌರ ಕಾರ್ಮಿಕರಾದ ರಂಗನಾಥ್, ಜಗದೀಶ್, ಅಂಗನವಾಡಿ 
ಕಾರ್ಯಕರ್ತೆರಾದ ಸುಶೀಲಮ್ಮ, ಗುಲ್ಚಾರ್, ಆಶಾ 
ಕಾರ್ಯಕರ್ತೆಯರಾದ ನಾಜೀಮಾ ಬಾನು, ಗೀತಾ, 108 ವಾಹನದ ಪೈಲಟ್ 
ಡ್ರೈವರ್ ಪ್ರಭುದೇವ, ಸ್ಟಾಫ್‍ನರ್ಸ್ ರಂಗಪ್ಪ ಅವರನ್ನು 
ಸನ್ಮಾನಿಸಲಾಯಿತು. 

ನರೇಗಾ ಯೋಜನೆಯಡಿ ಸಾಧನೆ ಮಾಡಿ ಪ್ರಶಸ್ತಿಗೆ 
ಆಯ್ಕೆಯಾದ ಅಧಿಕಾರಿ ಸಿಬ್ಬಂದಿಗಳ ವಿವರ 

 ತಿಪಟೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಸುದರ್ಶನ್, ಶಿರಾ ತಾಲೂಕು 
ಸಹಾಯಕ ಕೃಷಿ ನಿರ್ದೇಶಕರಾದ ರಂಗನಾಥ್, ಮೂರ್ತಿ, 
ಹುಲಿಕುಂಟೆ ಗ್ರಾ.ಪಂ ಪಿಡಿಓ ಬಸವರಾಜು, ತಾಂತ್ರಿಕ ಸಹಾಯಕ ಅಮಿತ್, 
ಐಇಸಿ ಸಂಯೋಜಕ ಶಿವಕುಮಾರ್, ಬಿ.ಎಫ್.ಟಿ ಕೆ.ಹೆಚ್ ಗಂಗಾಧರಯ್ಯ, 
ಮಧುಗಿರಿ ತಾಲೂಕು ಆರ್‍ಎಫ್‍ಒ ತಾರಕೇಶ್ವರಿ, ಕುಣಿಗಲ್ ಹಿರಿಯ 
ಸಹಾಯಕ ತೋಟಗಾರಿಕೆ ನಿರ್ದೇಶಕ ನಾಗರಾಜು, ಮಧುಗಿರಿ 
ಸಹಾಯಕ ರೇಷ್ಮೆ ನಿರ್ದೇಶಕ ನಾಗರಾಜು, ಮಧುಗಿರಿ ಸಹಾಯಕ 
ಕಾರ್ಯಪಾಲಕ ಅಭಿಯಂತರರು ಸುರೇಶ್, ಸಿಂಗನಹಳ್ಳಿ ಗ್ರಾ.ಪಂ 
ಪಿಡಿಓ ವೆಂಕಟಾಚಲಪತಿ, ತಾಂತ್ರಿಕ ಸಂಯೋಜಕ ಹರಿಪ್ರಸಾದ್, 
ತಿಪಟೂರು ತಾಂತ್ರಿಕ ಸಂಯೋಜಕ ಸುಜಯ್, ಬಲರಾಮ್, ಪ್ರಕಾಶ್ 
ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ವಿಧಾನ 
ಪರಿಷತ್ ಶಾಸಕ ಕಾಂತರಾಜು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ 
ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹಾಜರಿದ್ದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99